Sunday, August 14, 2022

Latest Posts

ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಟ್ರಾಕ್ಟರ್ ಗೆ ಸಿಲುಕಿ ಬಾಲಕ ಸಾವು

ಪಾಂಡವಪುರ: ಜಮೀನಿ ನಲ್ಲಿ ಉಳುಮೆ ಮಾಡುತ್ತಿದ್ದಾಗ ಟ್ರಾಕ್ಟರ್ ರೋಟರಿಗೆ ಸಿಲುಕಿ ಬಾಲಕನೋರ್ವ ಸಾವನ್ನಪ್ಪಿರುವ ಧಾರುಣ ಘಟನೆ ತಾಲೂಕಿನ ಬಿಂಡಹಳ್ಳಿ ಗ್ರಾಮ ದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಗ್ರಾಮದ ಕೃಷ್ಣೇಗೌಡ ಅವರ ಪುತ್ರ ಶ್ರೀಕಾಂತ್ (13) ಎಂಬಾತ ಮೃತ ಬಾಲಕ. ಗ್ರಾಮದ ಭದ್ರೇಗೌಡ ಅವರಿಗೆ ಸೇರಿದ ಜಮೀನಿನಲ್ಲಿ ನಂಜುಂಡ ಎಂಬಾತ ಚಾಲಕ ಟ್ರಾಕ್ಟರ್ ರೋಟರಿಯಲ್ಲಿ ಜಮೀನು ಉಳುಮೆ ಮಾಡು ತ್ತಿದ್ದ ಸಂದರ್ಭದಲ್ಲಿ ಅಡ್ಡ ಬಂದ ಬಾಲಕನ ಮೇಲೆ ಟ್ರಾಕ್ಟರ್ ರೋಟರಿ ಹರಿದಿದೆ. ಇದರ ಪರಿಣಾಮ ಬಾಲಕ ಶ್ರೀಕಾಂತ್ ಸ್ಥಳದಲ್ಲೇ ಸಾವನ್ನಪ್ಪಿದ ಎನ್ನಲಾಗಿದೆ.
ಈ ಸಂಬಂಧ ಕೆಆರ್‍ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss