Wednesday, July 6, 2022

Latest Posts

ಜಮೀರ್ ಅಹ್ಮದ್ ರಕ್ಷಣೆಗೆ ನಿಂತ ಸಿದ್ದು: ಸಿದ್ದಾರಮಯ್ಯ ಬೇಜಾಬ್ದಾರಿ ಹೇಳಿಕೆ: ಸಚಿವ ಶೆಟ್ಟರ್ ಆರೋಪ

ಧಾರವಾಡ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರು ಜಮೀರ್ ಅಹ್ಮದ್ ಕ್ಯಾಸಿನೋಗೆ ಹೋದರೆ ತಪ್ಪೇನು? ಎಂಬ ಹೇಳಿಕೆ ಕೊಡುವ ಮೂಲಕ ಅವರ ರಕ್ಷಣೆಗೆ ನಿಂತಿದ್ದಾರೆoದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಜಗಿದೀಶ ಶೆಟ್ಟರ್ ಗಂಭೀರ ಆರೋಪ ಮಾಡಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಯಾಸಿನೋಗೆ ಹೋದರೆ ತಪ್ಪಲ್ಲ ಎಂಬ ಹೇಳಿಕೆ ಯುವ ಜನಾಂಗಕ್ಕೆ ಇಸ್ಪೇಟ್, ಜೂಜಾಟ ಆಡಬಹುದೆಂಬ ಸಂದೇಶ ಕೊಟ್ಟಂತೆ. ಜವಾಬ್ದಾರಿ ಹೇಳಿಕೆ ಕೊಡುವುದು ಸಿದ್ದರಾಮಯ್ಯರ ವ್ಯಕ್ತಿತ್ವಕ್ಕೆ ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ವಿಪಕ್ಷದವರು ಮೊದಲು ಬಂಧಿಸಿದವರನ್ನು ತನಿಖೆ ಮಾಡಲು ಬಿಡಬೇಕು. ಕಾಂಗ್ರೆಸ್ ಸರ್ಕಾರ ಹಾಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವೇ ಡ್ರಗ್ಸ್ ಜಾಲ ಪೋಷಿಸಿಕೊಂಡು ಬಂದಿದೆ. ಈಗ ಹೆಮ್ಮರವಾಗಿದೆ ಅದನ್ನು ರಾಜ್ಯ ಬಿಜೆಪಿ ಸರ್ಕಾರ ಬುಡ ಸಮೇತ ಕಿತ್ತು ಹಾಕಲಿದೆ ಎಂದರು.
ಜಿ.ಪರಮೇಶ್ವರ ಗೃಹಮಂತ್ರಿ ಇದ್ದ ಸರ್ಕಾರದಲ್ಲಿ ಡ್ರಗ್ಸ್ ಜಾಲದ ಬಗ್ಗೆ ನಾನು ಧ್ವನಿ ಎತ್ತಿ ಕ್ರಮಕ್ಕೆ ಒತ್ತಾಯಿಸಿದ್ದೆ. ಅವರು ಸ್ಪಂದಿಸಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲವೂ ಒಂದೊoದಾಗಿ ಹೊರಗೆ ಬರುತ್ತಿವೆ. ಎಷ್ಟೇ ಪ್ರಭಾವಿಗಳಿದ್ದರೂ, ಕ್ರಮ ಕೈಗೊಳ್ಳಲು ಸಿಎಂ ಸೂಚಿಸಿದ್ದಾರೆ ಎಂದರು.
ಯುವ ಜನರು ಹೆಚ್ಚು ಡ್ರಗ್ಸ್ ಅಂಟಿಕೊoಡಿದ್ದಾರೆ. ಹುಬ್ಬಳ್ಳಿ-ಧಾರವಾಡದ ಯುವಕರೂ ಡ್ರಗ್ಸ್ಗೆ ಅಡಿಟ್ ಆಗಿದ್ದಾರೆ. ವಿಪಕ್ಷದವರು ತನಿಖೆಗೆ ಸಹಕಾರ ನೀಡಿದರೆ, ಎಲ್ಲವೂ ಬಯಲಿಗೆ ಬರಲಿದೆ. ಬಿಜೆಪಿಗರು ಹೆಸರು ಹೇಳಿದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪ್ರಶ್ನೆಗೆ ಉತ್ತರಿಸಿದರು.
ಇನ್ನೂ ಡ್ರಗ್ಸ್ ಜಾಲದಲ್ಲಿ ಐಎಎಸ್-ಐಪಿಎಸ್ ಅಧಿಕಾರಿಗಳ ಭಾಗಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಮುಖ್ಯಮಂತ್ರಿಗಳು ಆದೇಶಿಸಿದ್ದು, ಗೃಹಮಂತ್ರಿ ಹಾಗೂ ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘೀಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss