ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದ ಅನಂತ್ ನಾಗ್ ಬಳಿ ಉಗ್ರನೊಬ್ಬನನ್ನು ಭದ್ರತಾ ಪಡೆ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ.
ಇಮ್ರಾನ್ ನಬಿ ಎಂಬಾತ ಬಂಧಿತ ಉಗ್ರನಾಗಿದ್ದು, ಇತನ್ನು ಅನಂತನಾಗ್ ಜಿಲ್ಲೆಯ ಜಂಗ್ಲಾತ್ ಮಂಡಿ ಬಳಿ ಕಳೆದ ರಾತ್ರಿ ಭದ್ರತಾ ಪಡೆ ಸಿಬ್ಬಂದಿ ಬಂಧಿಸಿದ್ದಾರೆ. ಆತನಿಂದ ಪಿಸ್ತೂಲ್ ವೊಂದನ್ನು ವಶಪಡಿಸಿಕೊಳ್ಳಲಾಗಿದೆ.
ಉಗ್ರ ಇಮ್ರಾನ್ ನಬಿ ದಾರ್ ಕಳೆದ ಮೇ 10 ರಂದು ಭಯೋತ್ಪಾದಕ ಸಂಘಟನೆಗೆ ಸೇರಿಕೊಂಡಿದ್ದನು ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.