ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಜಮ್ಮು-ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ(ಡಿಡಿಸಿ) ಚುನಾವಣೆಗೆ ಎರಡನೇ ಹಂತದ ಮತದಾನ ಪ್ರಾರಂಭವಾಗಿದ್ದು, 7 ಲಕ್ಷದ 90 ಸಾವಿರ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಎಲ್ಲೆಡೆ ತೀವ್ರ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ತೀವ್ರ ಚಳಿಯ ನಡುವೆಯೂ ಮತದಾರರು ಮತಚಲಾಯಿಸಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದೆ.
ಎರಡನೇ ಹಂತದಲ್ಲಿ 2,142 ಮತಗಟ್ಟೆಗಳಲ್ಲಿ 7 ಲಕ್ಷದ 90 ಸಾವಿರ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, 321 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಬೆಳಗ್ಗೆ ಚಳಿ ಹೆಚ್ಚಿದ್ದರಿಂದ ಕೆಲವರಷ್ಟೇ ಬಂದು ತಮ್ಮ ಹಕ್ಕು ಚಲಾಯಿಸುವುದು ಕಂಡುಬಂದಿತ್ತು. ಇದೀಗ ಮತದಾನ ಪ್ರಕ್ರಿಯೆ ಚುರುಕಿಗೊಂಡಿದೆ. ಮತಗಟ್ಟೆಗಳಲ್ಲಿ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಕೆ ಕೆ ಶರ್ಮ ತಿಳಿಸಿದ್ದಾರೆ.