Tuesday, August 16, 2022

Latest Posts

ಜಮ್ಮು ಕಾಶ್ಮೀರ| ಪೊಲೀಸ್ ಅಧಿಕಾರಿಯ ಗಿಟಾರ್ ವಾದನಕ್ಕೆ ತಲೆದೂಗಿದ ರೈಲು ಪ್ರಯಾಣಿಕರು

ಜಮ್ಮು ಕಾಶ್ಮೀರ: ಪೊಲೀಸ್ ಅಧಿಕಾರಿಯೊಬ್ಬರು ಜಮ್ಮುವಿನ ರೈಲ್ವೆ ನಿಲ್ದಾಣ ಮುಂಭಾಗದಲ್ಲಿ ಸುಶ್ರಾವ್ಯವಾಗಿ ಹಿಂದಿ ಹಾಡುಗಳನ್ನು ಹಾಡುತ್ತಿದ್ದರೆ ಇತ್ತ ಪ್ರಯಾಣಿಕರು ಪೊಲೀಸ್ ಅಧಿಕಾರಿಯ ಹಾಡಿಗೆ ತಲೆದೂಗಿದ್ದಾರೆ.

ಪೊಲೀಸ್ ಅಧಿಕಾರಿ 1970 ರ ಗುಲಾಬಿ ಆಂಕೆ ಮತ್ತು 1988ರ‌ ಖಯಾಮತ್ ಸೆ ಖಯಾಮತ್ ಚಿತ್ರದ ‘ರ ಪಪ ಕೆಹ್ತೆ ಹೇ’ ಹಾಡನ್ನು ಹಾಡುವ ಮೂಲಕ ತಮ್ಮ ಪ್ರತಿಭೆಯನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶಿಸಿದ್ದಾರೆ.

ಹಾಡಿನೊಂದಿಗೆ ಗಿಟಾರ್ ಕೂಡ ನುಡಿಸುತ್ತಿದ್ದ ಪೊಲೀಸ್ ಅಧಿಕಾರಿಯ ಪ್ರಾವಿಣ್ಯಕ್ಕೆ ಪ್ರಯಾಣಿಕರು ಫುಲ್ ಖುಷ್ ಆಗಿದ್ದಾರೆ. ಜಮ್ಮು ರೈಲ್ವೆ ನಿಲ್ದಾಣದಿಂದ ಹೊರಡುವ ಮೊದಲ ರೈಲಿನ ಪ್ರಯಾಣಿಕರಿಗೆ ಈ ಹಾಡುಗಳನ್ನು ಹಾಡಿದ್ದು ದಿನಪೂರ್ತಿ ಪ್ರಯಾಣಿಕರ ಜೀವನ ಖುಷಿ ಖುಷಿಯಾಗಿ ಇರಲಿ ಎಂದು ಈ ರೀತಿ ಮಾಡಿದ್ದಾರಂತೆ. ಪೊಲೀಸ್ ಅಧಿಕಾರಿ ಹಾಡನ್ನು ಮುಖೇಶ್ ಸಿಂಗ್ ಎಂಬ ಮತ್ತೋರ್ವ ಅಧಿಕಾರಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಇದೀಗ ಈ ವಿಡಿಯೋ ಹೆಚ್ಚು ಜನಪ್ರಿಯತೆ ಪಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss