ಹೊಸ ದಿಗಂತ ಆನ್ಲೈನ್ ಡೆಸ್ಕ್:
ಜಮ್ಮು ಕಾಶ್ಮೀರದ ಪೂಚ್ ಜಿಲ್ಲೆಯ ಮೆಂಧರ್ ಸೆಕ್ಟರ್ನ ನಿಯಂತ್ರಣ ರೇಖೆ ಬಳಿ ಹಾರಾಟ ನಡೆಸುತ್ತಿದ್ದ ನಿಗೂಡ ವಸ್ತುವೊಂದನ್ನು ಭದ್ರತಾಪಡೆಗಳು ಹೊಡೆದುರುಳಿಸಿವೆ.
ಭಾನುವಾರ ಬೆಳಿಗ್ಗೆ ಭಾರತಕ್ಕೆ ಸೇರಿರುವ ಭೂ ಭಾಗದಲ್ಲಿ ನಿಗೂಢ ಯಂತ್ರವೊಂದು ಹಾರಾಟ ನಡೆಸುತ್ತಿತ್ತು. ಕಳೆದ ತಿಂಗಳಷ್ಟೇ ಇದೇ ವಲಯದಲ್ಲಿ ಹಾರಾಟ ನಡೆಸುತ್ತಿದ್ದ ಪಾಕಿಸ್ತಾನ ಸೇನೆಯ ಕ್ವಾಡ್ಕಾಪ್ಟರ್ ಅನ್ನು ಪತ್ತೆ ಹಚ್ಚಿದ್ದ ಭಾರತೀಯ ಸೇನೆ, ಅದನ್ನು ನಾಶಪಡಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಅದರ ಬೆನ್ನಿಗೇ ಮತ್ತೊಂದು ಹೊಸ ಬೆಳವಣಿಗೆ ನಡೆದಿದೆ.
ಇಂದು ಎಲ್ಒಸಿ ಬಳಿ ಹೊಡೆದುರುಳಿಸಲಾಗಿರುವ ವಸ್ತು ಡ್ರೋನ್ ಆಗಿದೆಯೇ ಅಥವಾ ಬೇರೆ ಯಾವುದಾದರೂ ವಸ್ತುವೇ ಎಂಬುದು ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ.