ಜರ್ಮನಿ: ಕೊರೋನಾ ಕೊಡುವ ಆರ್ಥಿಕ ಕುಸಿತಕ್ಕೆ ಅಂಜಿ ಹಣಕಾಸು ರಾಜ್ಯ ಸಚಿವ ಆತ್ಮಹತ್ಯೆಗೆ ಶರಣು

0
83

ಫ್ರಾಂಕ್‌ಫರ್ಟ್: ಕೋವಿಡ್ 19 ವೈರಸ್ ಕೊಟ್ಟಿರುವ ಹೊಡೆತಕ್ಕೆ ಕಂಗೆಟ್ಟಿರುವ ಜರ್ಮನಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಸಿಕ್ಕಿದೆ.
ಇಲ್ಲಿನ ಹೆಸ್ಸೆ ಪ್ರಾಂತ್ಯದ ಹಣಕಾಸು ರಾಜ್ಯ ಸಚಿವ ಥಾಮಸ್ ಶೆಫರ್, ಕೊರೋನಾ ವೈರಸ್ ತಂದೊಡ್ಡಿರುವ ಆರ್ಥಿಕ ಕುಸಿತವನ್ನು ಹೇಗೆ ನಿಭಾಯಿಸುವುದು ಎಂಬ ಚಿಂತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
೫೪ ವರ್ಷದ ಥಾಮಸ್ ಶೆಫರ್ ಅವರ ಮೃತದೇಹ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಸುಮಾರು 10 ವರ್ಷಗಳ ಕಾಲ ಹಣಕಾಸು ಮುಖ್ಯಸ್ಥರಾಗಿದ್ದ ಥಾಮಸ್ ಶೆಫರ್, ಕೊರೋನಾ ವೈರಸ್‌ನಿಂದಾಗಿರುವ ಆರ್ಥಿಕ ಪರಿಣಾಮವನ್ನು ಎದುರಿಸಲು ಕಂಪನಿಗಳು ಮತ್ತು ಕಾರ್ಮಿಕರಿಗೆ ಸಹಾಯ ಮಾಡಲು ಹಗಲು ರಾತ್ರಿ ಕೆಲಸ ಮಾಡುತ್ತಿದ್ದರು. ದೇಶದ ಭವಿಷ್ಯದ ಕುರಿತು ಅವರು ತೀವ್ರವಾಗಿ ಚಿಂತಿತರಾಗಿದ್ದರು. ಈ ಕಷ್ಟದ ಸಮಯದಲ್ಲಿ ನಮಗೆ ಅವರಂತಹ ಒಳ್ಳೆಯ ವಿತ್ತ ಸಚಿವರ ಅವಶ್ಯಕತೆ ಇತ್ತು ಎಂದು ಪ್ರಧಾನಿ ಬೌಫಿಯರ್ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here