Monday, August 15, 2022

Latest Posts

ಜಲಜೀವನ್ ಮಿಷನ್ ಯೋಜನೆಯ ವ್ಯಾಪ್ತಿಗೆ ತುಮಕೂರು ಜಿಲ್ಲೆಯ ಸೇರ್ಪಡೆಗೆ ಸಿಎಂ ಗೆ ಮನವಿ

ತುಮಕೂರು: ರಾಷ್ಟ್ರದ ಗ್ರಾಮೀಣ ಪ್ರದೇಶದಲ್ಲಿನ ಜನರಿಗೆ ನಿರಂತರ ವಾಗಿದೆ ಶುದ್ಧ ಕುಡಿಯುವ ನೀರು ಒದಗಿಸುವ ಪ್ರಧಾನ ಮಂತ್ರಿಗಳ ಕನಸಿನ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆಯ ವ್ಯಾಪ್ತಿಗೆ ತುಮಕೂರು ಜಿಲ್ಲೆಯನ್ನೂ ಸೇರಿಸಲು ಮುಖ್ಯ ಮಂತ್ರಿ ಯಡಿಯೂರಪ್ಪನವರು ಒಪ್ಪಿದ್ದಾರೆ ಎಂದು ತುಮಕೂರು ಸಂಸದ ಜಿ.ಎಸ್. ಬಸವರಾಜು ತಿಳಿಸಿದ್ದಾರೆ.
ಆಗಸ್ಟ್ 23ರಂದು ಸಂಸದರು ಮುಖ್ಯ ಮಂತ್ರಿ ಗಳ ಜೊತೆಯಲ್ಲಿ ಸಮಾಲೋಚನೆ ನಡೆಸಿದ ನಂತರ ಅವರು ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅತೀಕ್ ಅವರಿಗೆ ಸೂಚಿಸಿರುವುದಾಗಿ ಸಂಸದರು ತಿಳಿಸಿದ್ದಾರೆ.
ಈ ಯೋಜನೆಗೆ ಪೂರಕವಾಗಿ ಜಿಲ್ಲೆಯ ಕುಡಿಯುವ ನೀರಿಗಾಗಿ ಹೇಮಾವತಿಯಿಂದ 6.237 ಟಿ.ಎಂ.ಸಿ.ಭದ್ರಾಮೇಲ್ದಂಡೆಯಿಂದ3.025ಟಿ.ಎಂ.ಸಿ. ಎತ್ತಿನಹೊಳೆ ಯೋಜನೆಯಿಂದ ಕುಡಿಯುವ ನೀರಿಗೆ 2.43 ಟಿ.ಎಂ.ಸಿ. ಕೆರೆಗಳಿಗೆ 2.16ಟಿ.ಎಂ.ಸಿ.ತುಂಗಭದ್ರಾ ಯೋಜನೆ ಯಿಂದ 0.745 ಎಂ
ಸಿ.ಎಫ್. ಟಿ. (0.75 ಟಿ.ಎಂ.ಸಿ.) ಯಂತೆ ಒಟ್ಟು ಈ ಎಲ್ಲಾ ನದಿ ಮೂಲಗಳಿಂದ ಕುಡಿಯುವ ನೀರಿಗಾಗಿಯೇ 14.602 ಟಿ.ಎಂ.ಸಿ. ನೀರು ಜಿಲ್ಲೆಗೆ ಅಲೋಕೇಷನ್ ಆಗಿರುವುದಾಗಿ ಸಂಸದರು ತಿಳಿಸಿದ್ದಾರೆ.
ಇಷ್ಟು ಪ್ರಮಾಣದ ನೀರಿದ್ದರೂ ಸಹ ಜಿಲ್ಲೆಗೆ ನದಿ ನೀರಿನ ಮೂಲಕವೇ ಇಲ್ಲ ಎಂದು ಜಲಜೀವನ್ ಮಿಷನ್ ಯೋಜನೆಯಿಂದ ಜಿಲ್ಲೆಯನ್ನು ಕೈಬಿಟ್ಟಿರುವ ಬಗ್ಗೆ ಸಂಸದರು ಅತೀಕ್ ಅವರ ಜೊತೆ ಚರ್ಚಿಸಿದರು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿಗಾಗಿ ಕೇವಲ2.85 ಟಿ.ಎಂ.ಸಿ. ನೀರು ಬೇಕಾಗುತ್ತದೆ ಎಂದು ಅಧಿಕಾರಿಗಳು ಅಂದಾಜು ಮಾಡಲಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಈ ಯೋಜನೆಯಡಿ ಸೇರಿಸುವುದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅತೀಕ್ ಅವರು ತಿಳಿಸಿರುವುದಾಗಿ ಸಂಸದರು ತಿಳಿಸಿದ್ದಾರೆ. ಈ ವರ್ಷದಿಂದಲೇ ಹೇಮಾವತಿ ನೀರು ಹರಿಯುವ ತಾಲೂಕುಗಳ ಗ್ರಾಮಪಂಚಾಯಿತಿಗಳು ಮತ್ತು ಸಂಸದರ ಆದರ್ಶಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ದಿಶಾಸಮಿತಿ ಸದಸ್ಯರಾದ ಕುಂದರನಹಳ್ಳಿ ರಮೇಶ್ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss