Friday, July 1, 2022

Latest Posts

ಜಲ ಜೀವನ್ ಮಿಷನ್ ಯೋಜನೆಯಡಿ ಔರಾದ್‍ಗೆ 22.4 ಕೋಟಿ ಅನುದಾನ ಮಂಜೂರು: ಸಚಿವ ಪ್ರಭು ಚವ್ಹಾಣ್

ಹೊಸ ದಿಗಂತ ವರದಿ, ಬೀದರ:

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಜಾರಿಗೆ ತಂದಿರುವ ಜಲ ಜೀವನ್ ಮಿಷನ್ ಯೋಜನೆಯಡಿ ಔರಾದ ತಾಲೂಕಿಗೆ 22.4 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಪಶು ಸಂಗೋಪನೆ, ಹಜ್, ವಕ್ಫ್ ಹಾಗೂ ಬೀದರ-ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ತಿಳಿಸಿದ್ದಾರೆ.
ತಾಲೂಕಿನ ಚಾಂದೋರಿ, ಹಾಲಳ್ಳಿ, ಚಿಕ್ಲಿ(ಜೆ), ನಾಗನಪಳ್ಳಿ, ಬಾಬ್ಳಿ, ಧೂಪತಮಹಾಗಾಂವ್, ಮಣಿಗೆಂಪೂರ, ರಂಡ್ಯಾಳ, ಬಾವಲಗಾಂವ್, ಹೊಕ್ರಾಣಾ, ಹೊಳಸಮುದ್ರ, ಜಮಗಿ, ಕಮಲನಗರ, ಲಾಧಾ, ಮದನೂರ್, ಮುರ್ಕಿ, ನಾಗಮಾರಪಳ್ಳಿ, ಶೆಂಬೆಳ್ಳಿ, ಸೋನಾಳ, ಜೀರ್ಗಾ(ಜೆ), ಹೊರಂಡಿ, ಕಾಳಗಾಪೂರ, ಇಟಗ್ಯಾಳ, ಸುಂದಾಳ, ಯೆನಗುಂದಾ, ಮುಧೋಳ(ಕೆ), ಸೋರಳ್ಳಿ, ಸೋರಳ್ಳಿ ತಾಂಡಾ, ಮಾಳೆಗಾಂವ್, ಲಷ್ಕರ್ ತಾಂಡಾ, ಮಹಾದೇವ ತಂಡಾ, ಮಾರುತಿ ತಾಂಡಾ, ಹಿಪ್ಪಳಗಾಂವ್, ಖಂಡಿಕೇರಿ, ಬೆಳಕುಣಿ ಗ್ರಾಮಗಳು ಈ ಯೋಜನೆಗೆ ಆಯ್ಕೆಯಾಗಿವೆ.
ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸಲು ಜಲ ಜೀವನ ಮಿಷನ್ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಔರಾದ ತಾಲೂಕಿಗೆ ಸಂಬಂಧಿಸಿದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಕ್ರೀಯಾ ಯೋಜನೆ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಹಂತ ಹಂತವಾಗಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು. ಲಭ್ಯವಿರುವ ನೀರಿನ ಸಂಪನ್ಮೂಲಗಳನ್ನು ಬಳಸಿಕೊಂಡು ಆಯ್ಕೆಯಾಗಿರುವ ಗ್ರಾಮಗಳ ಪ್ರತಿ ಮನೆಗೆ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss