Monday, August 15, 2022

Latest Posts

ಜಾಂಡೀಸ್ ಅಥವಾ ಕಾಮಾಲೆ ರೋಗಕ್ಕೆ ಬೆಸ್ಟ್ ಮನೆಮದ್ದು

ಜಾಂಡೀಸ್ ಅಥವಾ ಹಳದಿ ಕಾಮಾಲೆ ರೋಗಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಗಿಂತ ನಾಟಿ ವೈದ್ಯರಲ್ಲಿಯೇ ಚಿಕಿತ್ಸೆ ಪಡೆಯುವವರು ಹೆಚ್ಚು. ಪ್ರತಿ ಊರಿನಲ್ಲಿಯೂ ಹಳದಿ ಕಾಮಾಲೆ ರೋಗಕ್ಕೆ ಔಷಧಿ ಕೊಡುವವರು ಇದ್ದೇ ಇರುತ್ತಾರೆ. ಈ ಕಾಯಿಲೆ ಬಂದಾಗ ಈಡೀ ದೇಹವೂ ಹಳದಿ ಬಣ್ಣಕ್ಕೆ ತಿರುಗುತ್ತದೆ. ಮೊದಲಿಗೆ ಕಣ್ಣು ಹಳದಿ ಬಣ್ಣವಾಗುತ್ತದೆ. ವಿಪರೀತ ಜ್ವರ ಬರುತ್ತದೆ. ಇಂಥ ಕಾಮಾಲೆ ರೋಗಕ್ಕೆ ಬೆಸ್ಟ್ ಮನೆ ಮದ್ದುಗಳು.

  • ಕಬ್ಬಿನ ಹಾಲನ್ನು ದಿನವೂ ಒಂದು ಗ್ಲಾಸ್ ಸೇವಿಸಿದರೆ ಕಾಮಾಲೆ ರೋಗ ಬರುವುದನ್ನು ತಡೆಯಬಹುದು.
  • ಒಂದೆಲಗವನ್ನು ಒಂದು ಚಮಚದಂತೆ ದಿನವೂ ಸೇವಿಸುವುದರಿಂದ ಕಾಮಾಲೆ ರೋಗ ಬರುವುದನ್ನು ತಡೆಯಬಹುದು.
  • ಒಂದು ಹಿಡಿಯಷ್ಟು ಪಪ್ಪಾಯಿಯ ಎಲೆಯನ್ನು ಸಂಗ್ರಹಿಸಿ ಇದನ್ನು ಅರೆದು ಲೇಪ ತಯಾರಿಸಿ ಇದಕ್ಕೆ ಕೊಂಚ ಜೇನು ಬೆರೆಸಿ. ಈ ಲೇಪವನ್ನು ನಿತ್ಯವೂ ಒಂದು ದೊಡ್ಡ ಚಮಚದಷ್ಟು ಪ್ರಮಾಣದಲ್ಲಿ ನಿತ್ಯವೂ ಒಂದೇ ಹೊತ್ತಿನಲ್ಲಿ ಸೇವಿಸುತ್ತಾ ಬಂದರೆ ಎರಡೇ ವಾರಗಳಲ್ಲಿ ಕಾಮಾಲೆ ರೋಗ ವಾಸಿಯಾಗುತ್ತದೆ.
  • ಸೂರ್ಯೋದಯದ ಸಮಯದಲ್ಲಿ ಬರುವಂತಹ ಎಳೆ ಬಿಸಿಲನ್ನು ನೋಡುವುದರಿಂದ ಆ ಬಿಸಿಲು ಈಡೀ ಮೈಗೂ ತಾಗುವಂತೆ ಮಾಡಿಕೊಂಡರೆ ಹಳದಿ ಕಾಮಾಲೆ ಬರುವುದಿಲ್ಲ.
  •  ಒಂದು ಲೋಟ ಮಜ್ಜಿಗೆಗೆ ಕೊಂಚ ಉಪ್ಪು, ಕಾಳುಮೆಣಸಿನ ಪುಡಿ, ಜೀರಿಗೆ ಗಳನ್ನು ಬೆರೆಸಿ ಪ್ರತಿ ಊಟದ ಬಳಿಕ ಸೇವಿಸುವ ಮೂಲಕ ಕಾಮಾಲೆ ರೋಗ ಶೀಘ್ರವೇ ಗುಣವಾಗುತ್ತದೆ.
  • ೧೦ ಮೂಲಂಗಿ ಎಲೆಗಳನ್ನು ಜಜ್ಜಿ ರಸ ತೆಗೆದು ಅದಕ್ಕೆ ಏನನ್ನು ಬೆರೆಸದೇ ಹಾಗೆಯೇ ಕುಡಿಯಬೇಕು. ಇದನ್ನು ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ ಸೇವಿಸಬೇಕು. ಹೀಗೆ ಮಾಡಿದರೆ ಒಂದೇ ವಾರದಲ್ಲಿ ಕಾಮಾಲೆ ರೋಗ ನಿವಾರಣೆಯಾಗುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss