ಹೊಸದಿಲ್ಲಿ: ಕಳೆದೊಂದು ಶತಮಾನದಲ್ಲಿ ವಿಶಿಷ್ಟ ಕಾರ್ಯಗಳ ಮೂಲಕ ಚಾಪು ಮೂಡಿಸಿರುವ ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಟೈಮ್ಸ್ ಸಂಸ್ಥೆ ತಯಾರಿಸಿದ್ದು, ಈ ಸಾಲಿನಲ್ಲಿ ಭಾರತದ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ್ತಿ ಅಮೃತ ಕೌರ್ ಅವರಿಗೆ ಸ್ಥಾನ ಲಭಿಸಿದೆ.
ಸ್ವಾತಂತ್ರ್ಯ ಹೋರಾಟಗಾರ್ತಿ ಕೌರ್ ಅವರನ್ನು 1947ರ ವರ್ಷದ ಮಹಿಳೆ ಎಂದು ಗುರುತಿಸಲಾಗಿದ್ದು, ಇಂದಿರಾ ಗಾಂಧಿ ಅವರನ್ನ 1976ರ ಅವಧಿಯ ಭಾರತದ ಉತ್ತಮ ನಾಯಕಿ ಎಂದು ಗುರುತಿಸಲಾಗಿದೆ. ದೇಶದ ಪ್ರಥಮಾ ಮಹಿಳಾ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ ರೀತಿ, ತುರ್ತು ಪರಿಸ್ಥಿತಿ ಸೇರಿದಂತೆ ಹಲವು ವಿಚಾರಗಳನ್ನು ಸಂಸ್ಥೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಕರ್ಥಾಲಾಪುರದ ರಾಜಮನೆತನ ಕುವರಿಯಾಗಿದ್ದ ಕೌರ್, ಆಕ್ಸ್ಫರ್ಡ್ನಲ್ಲಿ ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ಹಿಂತಿರುಗಿದ್ದು, ಮಹಾತ್ಮ ಗಾಂಧೀಜಿ ಅವರ ಬೋಧನೆಗಳಿಂದ ಆಕರ್ಷಿತರಾಗಿ ವಸಹಾತುಶಾಹಿ ದಬ್ಬಾಳಿಕೆಯ ವಿರುದ್ಧ ಹೋರಾಡಿದಾಕೆ. ಸ್ವಾತಂತ್ರ್ಯ ಲಭಿಸಿದ ಬಳಿಕ ಕ್ಯಾಬಿನೆಟ್ ಸೇರ್ಪಡೆಯಾದ ಮೊದಲ ಮಹಿಳೆ, ಬಾಲ್ಯವಿವಾಹ, ವಿಚ್ಛೇಧನ, ಮಹಿಳಾ ಸಬಲೀಕರಣಕ್ಕಾಗಿ ತೊಡಗಿಸಿಕೊಂಡ ಭಾರತೀಯ ಮಹಿಳೆ ಎಂದು ಕೌರ್ ಅವರನ್ನು ಸಂಸ್ಥೆ ಉಲ್ಲೇಖಿಸಿದೆ.
ಸಾಧಕ ಮಹಿಳೆಯರ ಸಾಲಿನಲ್ಲಿ ಇಂಗ್ಲೆಂಡ್ ರಾಣಿ ಎಲಿಜಿಬತ್, ರಾಜ ಕುಮಾರಿ ಡಯಾನಾ, ಚೀನಾದ ರಸಾಯಾನ ಶಾಸ್ತ್ರಜ್ಞೆ ತೋಯೂಯು, ಅಮೆರಿಕ ಮಾಜಿ ಪ್ರಥಮ ಮಹಿಳೆ ಮಿಶೆಲ್ ಒಬಾಮಾರ ಹೆಸರು ಕೂಡ ಸೇರ್ಪಡೆಗೊಂಡಿದೆ.