Wednesday, July 6, 2022

Latest Posts

ಜಾತಿ ನಿಂದನೆ ಪ್ರಕರಣ ದಾಖಲಿಸಿರುವುದಕ್ಕೆ ರುದ್ರಪ್ಪ ಲಮಾಣಿ ಸಾಕ್ಷಿ ನೀಡಲಿ : ಶಾಸಕ ನೆಹರು ಒಲೇಕಾರ 

ಹಾವೇರಿ: ನಗರಸಭೆಯ ಮೂವರು ಸದಸ್ಯರ ಮೇಲೆ ನಾನು ಜಾತಿ ನಿಂದನೆ ಪ್ರಕರಣ ದಾಖಲಿಸಿರುವೆ ಎನ್ನುವುದಕ್ಕೆ ಸಾಕ್ಷಿಗಳನ್ನು ನೀಡುವಂತೆ ಶಾಸಕ ನೆಹರು ಓಲೇಕಾರ ಅವರು ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಸವಾಲು ಹಾಕಿದರು.
ನಗರದ ತಾಲೂಕಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭಾ ಚುನಾವಣೆಯನ್ನು ವಾಮ ಮಾರ್ಗದಲ್ಲಿ ಪಡೆಯುವದಕ್ಕಾಗಿ ಬಿಜೆಪಿಯವರು ಈ ರೀತಿ ನಗರಸಭೆಯ ಮೂವರು ಸದಸ್ಯರ ಮೇಲೆ ಜಾತಿ ನಿಂದನೆ ಪ್ರಕರಣವನ್ನು ದಾಖಲಿಸಲಾಗಿದೆ ಎನ್ನುವುದು ಶುದ್ಧ ಸುಳ್ಳು, ಈ ಪ್ರಕರಣ ಕಳೆದ ಹತ್ತು ವರ್ಷಗಳಿಂದ ಇದೆ, ಕಾಕತಾಳೀಯ ಎನ್ನುವಂತೆ ನಗರಸಭೆ ಚುನಾವಣೆ ಸಂದರ್ಭದಲ್ಲಿನೇ ಆ ಮಹಿಳೆ ದೂರನ್ನು ನೀಡಿದ್ದಾರೆ. ಈ ಪ್ರಕರಣವನ್ನು ಕಾಂಗ್ರೆಸ್‌ನವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದರು.
ನಗರಸಭೆ ಅಧಿಕಾರ ಹಿಡಿಯುವದಕ್ಕಾಗಿ ಮೂವರು ಸದಸ್ಯರ ಮೇಲೆ ಜಾತಿ ನಿಂದನೆ ಪ್ರಕರಣವನ್ನು ದಾಖಲಿಸಿದ್ದೆ ಎಂದಾದರೆ ಈ ಸದಸ್ಯರು ಚುಣಾವಣೆಯಿಂದ ದೂರ ಉಳಿಯುವದಕ್ಕೆ ಅವಕಾಶವಿಲ್ಲ, ಮತದಾನದ ಸಮಯದಲ್ಲಿ ಅವರು ಬಂದು ಮತ ಚಲಾಯಿಸುವುದಕ್ಕೆ ಅವಕಾಶವಿದೆ. ಹೀಗಿರುವಾಗ ನಾನೇಕೆ ಜಾತಿ ನಿಂದನೆ ಪ್ರಕರಣವನ್ನು ದಾಖಲಿಸುವ ಕೆಟ್ಟ ಆಲೋಚನೆಯನ್ನು ಮಾಡಲಿ. ಅಂತಹ ವಿಚಾರಗಳೆನೇ ಇದ್ದರು ಅದು ಕಾಂಗ್ರೆಸ್ಸಿನವರದು ಎಂದು ಹೇಳಿದರು.
ನಗರಸಭಾ ಸದಸ್ಯ ಐ.ಯು.ಪಠಾಣ ಅವರು ಕಳೆದ ವರ್ಷ ಇದೇ ಅವಧಿಯಲ್ಲಿ ನಾಗೇಂದ್ರನಮಟ್ಟಿಯಲ್ಲಿ ಬೇರೆಯವರ ಆಸ್ತಿಯನ್ನು ಕಬಳಿಸಲು ಅವರು ಮತ್ತು ಅವರ ಪಟಾಲಿಯನ್ ಹೋದಾಗ ಆ ವ್ಯಕ್ತಿಯು ದೂರನ್ನು ದಾಖಲಿಸಿದ್ದರು ಆಗ ಪಠಾಣ ತಲೆಮರೆಸಿಕೊಂಡಿದ್ದರು. ಇದನ್ನು ಇನ್ನು ಜನತೆ ಮರೆತಿಲ್ಲ. ಐ.ಯು.ಪಠಾಣ ಮತ್ತು ಅವರ ಬಳಗ ಐದು ಗಾರ್ಡನ್ ಜಾಗೆಗಳು, ಸಂತೆ ಜಾಗೆಗಳು, ಕೊಟ್ಟಿ ದಾಖಲಾತಿಗಳನ್ನು ಸೃಷ್ಠಿಸಿ ಅವುಗಳನ್ನು ಮಾರಾಟ ಮಾಡುವ ಕೆಲಸವನ್ನು ಮಾಡಿದ್ದಾರೆ. ಇದಲ್ಲದೆ ಕೊಳಚೆ ನಿರ್ಮೂಲನಾ ಮಂಡಳಿಗೆ ಸಂಬಂಧಿಸಿದ ಜಾಗೆಗಳನ್ನು ಇವರು ಕಬಳಿಸಿ ಮಂಡಳಿಯ ಅಧಿಕಾರಿಗಳಿಗೆ ಮೋಸ ಮಾಡುವ ಕೆಲಸವನ್ನು ಮಾಡಿದ್ದಾರೆ ಎಂದರು.
ಈ ಹಿಂದೆ ನಾನು ಬ್ಯಾಡಗಿ ಶಾಸಕನಾಗಿದ್ದ ಸಂದರ್ಭದಲ್ಲಿಯೂ ಅನೇಕ ಜಾತಿ ನಿಂದನೆ ಪ್ರಕರಣಗಳಲ್ಲಿ ದಾಖಲಿಸಿದ್ದೇನೆ ಎಂದು ಹೇಳುವ ರುದ್ರಪ್ಪ ಲಮಾಣಿ ಅವರ ಬಳಿ ದಾಖಲೆಗಳಿದ್ದರೆ ಅವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಅಂದು ನಾನೊಬ್ಬ ಗುಂಡಾ ಎಂದು ಯಾವತ್ತು ಹೇಳಿಲ್ಲ. ಹಾಗಂತ ಯಾವಪತ್ರಿಕೆಯಲ್ಲಿ ಬಂದಿದೆ ಎನ್ನುವುದನ್ನು ತೋರಿಸಲಿ ಎಂದು ಓಲೇಕಾರ ಅವರು ಲಮಾಣಿ ಅವರಿಗೆ ಒತ್ತಾಯಿಸಿದರು.
ನಗರಸಭೆಯ ಖಾತೆ ಪುಸ್ತಕದಲ್ಲಿನ ಮೂಲಕ ಮಾಲೀಕರ ಹೆಸರಿನ ಮೇಳೆ ಹೊಯ್‌ಟನರ್ ಹಚ್ಚಿ ಬೇರೆ ಬೇರೆಯವರ ಹೆಸರುಗಳನ್ನು ದಾಖಲಿಸಿದ್ದಾರೆ. ಖಾತೆ ಪುಸ್ತಕದ ತುಂಬೆಲ್ಲ ಬರಿ ತಿದ್ದುಪಡಿಗಳನ್ನೇ ಕಾಣಬಹುದು. ಇದರಿಂದ ಬಹಳ ಜನತೆಗೆ ಅನ್ಯಾಯವನ್ನು ಮಾಡಿದಂತಹವರು ಪಠಾಣ ಮತ್ತಿತರರು. ಅದೇ ರೀತಿ ದೂರು ದಾಖಲಿಸಿರುವ ಮಹಿಳೆಯ ಆಸ್ತಿಯನ್ನು ಕಬಳಿಸುವುದಕ್ಕೆ ಹೋಗಿದ್ದಾರೆ ಹೀಗಾಗಿ ಆ ಮಹಿಳೆ ದೂರನ್ನು ದಾಖಲಿಸಿರುವ ವಿಷಯ ನನಗೆ ಆನಂತರದಲ್ಲಿ ತಿಳಿಯಿತು. ದೂರು ದಾಖಲೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ನಗರಸಭಾ ಸದಸ್ಯರಾದ ಗಿರೀಶ ತುಪ್ಪದ, ಬಸವರಾಜ ಬೆಳವಡಿ, ಚನ್ನಮ್ಮ ಬ್ಯಾಡಗಿ, ಚೈತ್ರಾ ಹತ್ತಿ, ರಜಿಯಾಬೃಗಂ ದೇವಿಹೊಸೂರ, ಜಗದೀಶ ಮಲಗೋಡ್, ಪರಶುರಾಮ ಅಗಡಿ ಹಾಗೂ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss