ದುಬೈ: ಸನ್ರೈಸರ್ಸ್ ಹೈದರಾಬಾದ್ ಹಾಗು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹೈದರಾಬಾದ್ ಬೃಹತ್ ಮೊತ್ತವನ್ನು ಕಲೆ ಹಾಕಿದೆ.
ಆರಂಭಿಕರಾದ ನಾಯಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್ಸ್ಟೋವ್ ಅವರ ಭರ್ಜರಿ ಅರ್ಧಶತಕಗಳ ಕಿಂಗ್ಸ್ ಇಲೆವೆನ್ ಪಂಜಾಬ್ ಗೆಲುವಿಗೆ 202ರನ್ಗಳ ಗುರಿ ನೀಡಿದೆ .
ನಾಯಕ ವಾರ್ನರ್(52) ಹಾಗೂ ಬೈರ್ಸ್ಟೋವ್(97) ಮೊದಲ ವಿಕೆಟ್ಗೆ 160 ರನ್ಗಳ ಬೃಹತ್ ಮೊತ್ತದ ಜೊತೆಯಾಟ ನೀಡಿದರು.ಇವರಿಬ್ಬರ ನಂತರ ಬಂದ ಮನೀಶ್ ಪಾಂಡೆ ಕೇವಲ 1 ರನ್ಗಳಿಸಿ ಅರ್ಷ್ದೀಪ್ ಸಿಂಗ್ ಬೌಲಿಂಗ್ನಲ್ಲಿ ಅವರಿಗೆ ಕ್ಯಾಚ್ ನೀಡಿ ಔಟಾದರೆ, ಇವರ ಬೆನ್ನಲ್ಲೇ ಅಬ್ದುಲ್ ಸಮದ್ 8 ರನ್ಗಳಿಸಿ ಬಿಷ್ಣೋಯ್ಗೆ ಮೂರನೇ ಬಲಿಯಾದರು. ಯುವ ಬ್ಯಾಟ್ಸ್ಮನ್ ಗರ್ಗ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಆದರೆ ಕೊನೆಯ 2 ಓವರ್ಗಳಲ್ಲಿ ಅಬ್ಬರಿಸಿದ ಕೇನ್ ವಿಲಿಯಮ್ಸನ್ ಹಾಗೂ ಅಭಿಷೇಕ್ ಶರ್ಮಾ ತಂಡದ ಮೊತ್ತವನ್ನು 200 ರ ಗಡಿದಾಟಿಸಿದರು.
ಅಭಿಷೇಕ್ 6 ಎಸೆತಗಳಲ್ಲಿ 12 ಹಾಗೂ ವಿಲಿಯಮ್ಸನ್ 10 ಎಸೆತಗಳಲ್ಲಿ 20 ರನ್ಗಳಿಸಿದರು.
ಕಿಂಗ್ಸ್ ಇಲೆವೆನ್ ಪಂಜಾಬ್ ಪರ ರವಿಬಿಷ್ಣೋಯ್ 3 ವಿಕೆಟ್, ಅರ್ಷ್ದೀಪ್ 2 ಹಾಗೂ ಶಮಿ ಒಂದು ವಿಕೆಟ್ ಪಡೆದರು