Wednesday, August 10, 2022

Latest Posts

ಜಾನುವಾರುಗಳಿಗೆ ಮಾರಕ ಲಂಪಿ ಚರ್ಮ ಕಾಯಿಲೆ: ದನಗಳಿಗೂ ಕ್ವಾರಂಟೈನ್?

 ಗುರುಮಠಕಲ್: ಕೊರೋನಾ ಭೀತಿಯಿಂದ ತತ್ತರಿಸಿದ ಜನರು ಕ್ವಾರಂಟೈನ್ ಆಗುತ್ತಿದ್ದರು. ಈಗ ಜಾನುವಾರುಗಳಿಗೆ ಮಾರಕ ಕಾಯಿಲೆ ವ್ಯಾಪಿಸುತ್ತಿರುವುದರಿಂದ ಜಾನುವಾರುಗಳಿಗೂ ಕ್ವಾರಂಟೈನ್ ಆಗಬೇಕಾದ ಪರಸ್ಥಿತಿ ಬಂದಿದೆ.
ಜಿಲ್ಲೆಯ ಗುರುಮಠಕಲ್ ತಾಲೂಕಿನಲ್ಲಿ ಬಹಳ ವರ್ಷಗಳ ನಂತರ ದನಗಳಿಗೆ ಲಂಪಿ ಚರ್ಮ ಕಾಯಿಲೆ ವ್ಯಾಪಿಸಿದ್ದು, ಇದು ರೈತರ ಆತಂಕಕ್ಕೆ ಕಾರಣವಾಗಿದೆ. ಇದರ ಚಿಕಿತ್ಸೆಗಾಗಿ ಜಾನುವಾರುಗಳನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಬೇಕಾದ ಸ್ಥಿತಿ ಒದಗಿ ಬಂದಿದೆ.
ಕೋವಿಡ್ ಭೀತಿಯಿಂದ ಕಂಗಲಾದ ರೈತರು ಈಗ ಜಾನುವಾರುಗಳಿಗೆ ಮಾರಕ ಕಾಯಿಲೆವೊಂದು ವ್ಯಾಪಿಸಿದ ಹಿನ್ನೆಲೆಯಲ್ಲಿ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಗುರುಮಠಕಲ್ ತಾಲುಕಿನ ಜಾನುವಾರುಗಳಿಗೆ ಲಂಪಿ ಚರ್ಮ ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆ ರೋಗ ಪೀಡಿತ ಜಾನುವಾರುಗಳನ್ನು ಕ್ವಾರೆಂಟೈನ್ ಮಾಡಲಾಗುತ್ತಿದೆ.
ಗುರುಮಠಕಲ್ ತಾಲೂಕಿನ, ಚಂಡರಕಿ, ಪುಟಪಾಕ, ಮಾಡೇಪಲ್ಲಿ, ಚಪೆಟ್ಲಾ, ಯದ್ಲಾಪುರ ರಂಪೂರ್, ಕಕಾಲವಾರ, ಎಂ.ಟಿ.ಪಲ್ಲಿ, ಬೋರಬಂಡ, ದರ್ಮಪೂರ್, ಚಿನ್ನಕರ್ ಗುಂಜನೂರು, ಕೊಂಕಲ್, ಅನಪುರ, ಗಾಜರಕೋಟ್, ಮೊಟ್ನಳ್ಳಿ, ಚಿಂತಕೂoಟಾ, ಕಂದಕೂರ, ಚಿಂತನಹಳ್ಳಿ, ಕಮಾಲನಗರ, ಮೊದಲಾದ ಗ್ರಾಮಗಳಲ್ಲಿ ಜಾನುವಾರುಗಳಿಗೆ ಈ ರೋಗ ಪತ್ತೆಯಾಗಿದೆ.
ರೋಗ ಪೀಡಿತ ದನಗಳಿಂದ ಆರೋಗ್ಯವಂತಹ ದನಗಳಿಗೆ ಈ ರೋಗ ಹರಡುವ ಸಾಧ್ಯತೆ ಇರುವದರಿಂದ ಕಾಯಿಲೆಯಿಂದ ಬಳಲುತ್ತಿರುವ ಜಾನುವಾರುಗಳನ್ನು ಪ್ರತ್ಯೇಕವಾಗಿ ಕಟ್ಟಿ ಹಾಕಿ ಐದು ದಿನಗಳ ಕಾಲ ಚಿಕಿತ್ಸೆ ನೀಡಲಾಗುತ್ತಿದೆ. ರೋಗ ಪೀಡಿತ ಜಾನುವಾರುಗಳಲ್ಲಿ ಗುಳ್ಳೆ ಹಾಗೂ ಜ್ವರ ಹೆಚ್ಚಾಗಿ ಕಾಣಿಸಿಕೊಂಡಿದ್ದು ದನಗಳು ಮೇವು ಸರಿಯಾಗಿ ತಿನ್ನುತ್ತಿಲ್ಲ. ಹಾಲು ಸರಿಯಾಗಿ ಕೊಡುತ್ತಿಲ್ಲ.
ಜಾನುವಾರುಗಳಿಗೆ ಈ ರೋಗ ಕಂಡು ಬಂದಿದ್ದರಿoದ ಅವುಗಳನ್ನು ಮೆಯಿಸಿಕೊಂಡು ಬರಲು ಜನರು ಹೆದರುತ್ತಿದ್ದಾರೆ.
ಪಶು ಸಂಗೋಪನೆ ಇಲಾಖೆ ಮೂಕಪ್ರಾಣಿಗಳಿಗೆ ವ್ಯಾಪಿಸಿದೆ ಈ ರೋಗಕ್ಕೆ ಸೂಕ್ತ ಚಿಕಿತ್ದೆ ಒದಗಿಸಿ ರೈತರಲ್ಲು ಉಂಟಾದ ಭೀತಿಯನ್ನು ಹೋಗಲಾಡಿಸಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ವಾಣರವರು ಪಶು ಸಂಗೋಪನಾ ಸಚಿವರಾಗಿದ್ದರಿಂದ ಜಾನುವಾರುಗಳಿಗೆ ಸೂಕ್ತ್ತ ಚಿಕಿತ್ಸೆ ಕ್ರಮ ತೆಗೆದುಕೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಗುರುಮಠಕಲ್ ತಾಲ್ಲೂಕುನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜಾನುವಾರುಗಳಲ್ಲಿ ಈ ಹೊಸ ರೋಗ ಕಾಣಿಸಿಕೊಂಡಿದೆ. ರೈತರು ಯಾವುದೇ ಭಯಗೊಳ್ಳದೆ ರೋಗ ಪೀಡಿತ ಜಾನುವಾರುಗಳನ್ನು ಪ್ರತ್ಯೇಕವಾಗಿ ಇರಿಸಿ  ಅಗತ್ಯ ಚಿಕಿತ್ಸೆ ನೀಡಲಾಗುತ್ತದೆ ಎಂದು ಡಾ.ವಿಜಯಕುಮಾರ.
ಪಶುಸಂಗೋಪನೆ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss