Saturday, July 2, 2022

Latest Posts

ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ಬಳಸಿ ಕ್ಯಾನ್ಸರ್ ಬಂದಿದೆ ಎಂದು ಆರೋಪ: ಪರಿಹಾರದ ಮೊತ್ತ ಕೇಳಿದರೆ ಶಾಕ್ ಆಗುತ್ತೀರಾ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ಬಳಸಿ ಕ್ಯಾನ್ಸರ್ ಗೆ ಗುರಿಯಾಗಿರುವುದಾಗಿ ಆರೋಪಿಸಿ ದಂಪತಿಗಳು ನ್ಯಾಯಾಲಯದ ಮೆಟ್ಟಿಲೇರಿ 325 ಮಿಲಿಯನ್ ಡಾಲರ್ ಪರಿಹಾರ ನೀಡುವಂತೆ ಜಾನ್ಸನ್ & ಜಾನ್ಸನ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಡೊನ್ನಾ ಓಲ್ಸನ್(67) ಮತ್ತ ರಾಬರ್ಟ್(65) ಅವರ ಪ್ರಕರಣವನ್ನು ಕೈಗೆತ್ತಿಕೊಂಡ ಮ್ಯಾನ್ಹ್ಯಾಟ್ ನ ನ್ಯಾಯಾಲಯ 325 ಮಿಲಿಯನ್ ಡಾಲರ್ ಪರಿಹಾರವನ್ನು 120 ಮಿಲಿಯನ್ ಡಾಲರ್ ಗೆ ತಗ್ಗಿಸಿದೆ. ಅಂದರೆ ಜಾನ್ಸನ್ & ಜಾನ್ಸನ್ ಸಂಸ್ಥೆಯು ಬರೋಬ್ಬರಿ 890 ಕೋಟಿ ರೂ. ಗಳನ್ನು ಪರಿಹರವಾಗಿ ನೀಡಲು ನ್ಯಾಯಾಲಯ ಆದೇಶಿಸಿದೆ.

ನ್ಯಾಯಾದೀಶರಾದ ಲೆಬೋವಿಟ್ಸ್ ಅವರು 14 ವಾರಗಳ ವಿಚಾರಣೆಯ ನಂತರ ಈ ತೀರ್ಪು ನೀಡಿದ್ದಾರೆ.

ಆದರೆ ಸದ್ಯ ಜಾನ್ಸನ್ & ಜಾನ್ಸನ್ ಸಂಸ್ಥೆಯು ಮೇಲ್ಮನೆ ಮಟ್ಟಿಲೇರುವ ಸಾಧ್ಯತೆಗಳಿದ್ದು, ಕ್ಯಾನ್ಸರ್ ನಿಂದ ಬಳಲುತ್ತಿರುವವರಿಗೆ ಸಹಾನುಭೂತಿ ತಿಳಿಸಿ, ಸತ್ಯಾಂಶಗಳು ಹೊರಬರುವುದು ಮುಖ್ಯವಾಗಿದೆ. ನಮ್ಮ ಪೌಡರ್ ಸುರಕ್ಷಿತವಾಗಿದೆ, ಇದರಿಂದ ಕ್ಯಾನ್ಸರ್ ಬರುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss