Sunday, June 26, 2022

Latest Posts

ಜಾನ್ಸನ್ & ಜಾನ್ಸನ್ ಸಂಸ್ಥೆಯ ಕೊರೋನಾ ಲಸಿಕೆ ಪ್ರಯೋಗ ಸ್ಥಗಿತ| ಕಾರಣ ಇಲ್ಲಿದೆ

ವಾಷಿಂಗ್ಟನ್: ಕೊರೋನಾ ಸೋಂಕಿಗೆ ಲಸಿಕೆ ತಯಾರಿಸಿರುವ ಜಾನ್ಸನ್ & ಜಾನ್ಸನ್ ಸಂಸ್ಥೆಯು ತನ್ನ ಕ್ಲಿನಿಕಲ್ ಪ್ರಯೋಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ಜಾನ್ಸನ್ & ಜಾನ್ಸನ್ ಸಂಸ್ಥೆ ಪ್ರಕಟಿಸಿದೆ.

ಕೊರೋನಾ ಲಸಿಕೆ ಪಡೆಯುತ್ತಿದ್ದವರಿಗೆ ವಿವರಿಸಲಾಗದ ರೋಗಗಳು ವರದೊಯಾಗಿರುವ ಹಿನ್ನಲೆ ಜಾನ್ಸನ್ & ಜಾನ್ಸನ್ ತನ್ನ ಲಸಿಕೆಯ ಪ್ರಯೋಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಈ ಲಸಿಕೆಯು ಸಿಂಗಲ್ ಶಾಟ್ ವ್ಯಾಕ್ಸನ್ ಆಗಿದ್ದು, ಸೋಂಕಿತರಿಗೆ ಒಂದು ಬಾರಿ ಈ ಲಸಿಕೆಯನ್ನು ನೀಡುವುದರಿಂದ ಸೋಂಕು ಮತ್ತೆ ಮರುಕಳಿಸುವುದಿಲ್ಲ ಎಂದು ಹೇಳಲಾಗಿದೆ. ಈಗಾಗಲೇ ಲಸಿಕೆ ತನ್ನ ಕೊನೆಯ ಹಂತದ ಪ್ರಯೋಗದಲ್ಲಿ 60 ಸಾವಿರ ಜನರಿಗೆ ಲಸಿಕೆ ನೀಡಿದೆ ಎಂದು ವರದಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss