Thursday, August 11, 2022

Latest Posts

ಜಾಲಪ್ಪನವರ ದೂರದೃಷ್ಟಿಯಿಂದ ಕೋಲಾರದಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಉತ್ತಮ ಆಸ್ಪತ್ರೆ ನಿರ್ಮಾಣ :ಶ್ರೀನಿವಾಸಗೌಡ

ಕೋಲಾರ:  ಮಾಜಿ ಸಂಸದ ಆರ್.ಎಲ್. ಜಾಲಪ್ಪನವರ ದೂರದೃಷ್ಟಿಯಿಂದಾಗಿ ಜನರ ಆರೋಗ್ಯ ಕಾಪಾಡಲು  ದೇವರಾಜ ಅರಸು ಮೆಡಿಕಲ್ ಕಾಲೇಜು ಪ್ರಾರಂಭಿಸಿದಂತೆ, ಹೃದಯವಂತಿಕೆಯಿಂದ ವಿಶೇಷ ಚೇತನ ಮಕ್ಕಳಿಗಾಗಿ ಅಂತರಗಂಗಾ ವಿದ್ಯಾಸಂಸ್ಥೆಗೆ ಸುಸಜ್ಜಿತ ಕಟ್ಟಡ ನೀಡಿದ್ದಾರೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿನಂದಿಸಿದರು.
ಅವರು ಶುಕ್ರವಾರ ನಗರದ ಅಂತರಗಂಗಾ ವಿಕಲಚೇತನರ ಆಶ್ರಮದ ಆವರಣದಲ್ಲಿ ಸುಸಜ್ಜಿತ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವರು ಮಾತನಾಡುತ್ತಿದ್ದರು.
ಅಂತರಗಂಗಾ ವಿದ್ಯಾಸಂಸ್ಥೆಯ ವಿಶೇಷಚೇತನ ಮಕ್ಕಳಿಗೆ ನೆರವಾಗಿರುವ ಜಾಲಪ್ಪ ಅವರು, ಇಂತಹ ಉತ್ತಮ ಕಟ್ಟಡ ಒದಗಿಸುವ ಮೂಲಕ ಹೃದಯವಂತಿಕೆ ಮೆರೆದಿದ್ದು, ಅವರಿಗೆ ದೇವರು ಇನ್ನೂ ಹೆಚ್ಚಿನ ಆಯುಷ್ಯ, ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಗೆ ನೀರಿನ ಅವಶ್ಯಕತೆ ಇರುವ ಬಗ್ಗೆ ಶಾಸಕರ ಗಮನಕ್ಕೆ ತಂದಾಗ ಸ್ಪಂದಿಸಿದ ಶಾಸಕರು ಅಗತ್ಯವಿರುವ ನೀರಿನ ವ್ಯವಸ್ಥೆ ಮಾಡಲು ಈ ದಿನವೇ ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸುವ ಭರವಸೆ ನೀಡಿದರು.
ಆರ್.ಎಲ್.ಜಾಲಪ್ಪ ಟ್ರಸ್ಟ್ ಕಾರ್ಯದರ್ಶಿ ಜಿ.ಹೆಚ್.ನಾಗರಾಜ್ ಮಾತನಾಡಿ, ಸಂಸ್ಥೆಯ ಎಲ್ಲಾ ಟ್ರಸ್ಟಿಗಳ ಸಹಕಾರದೊಂದಿಗೆ ಜಾಲಪ್ಪನವರ ಮಾರ್ಗ ದರ್ಶನದಲ್ಲಿ ಕಳೆದ ೪೦ ವರ್ಷಗಳಿಂದ ಅನೇಕ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಆರೋಗ್ಯ ಕಲ್ಪಿಸುವಲ್ಲಿ,ಪರಿಸರ ಕಾಪಾಡಲು ಗಿಡನೆಡುವ ಕಾರ್ಯಕ್ರಮ ರೂಪಿಸಲು,ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು ಹಾಗೂ ಜಾಲಪ್ಪ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅನಾನುಕೂಲವಾಗಬಾರದೆಂಬ ದೃಷ್ಟಿಯಿಂದ ಉಚಿತ ತಿಂಡಿ, ಎರಡೂ ಹೊತ್ತಿನ ಊಟದ ವ್ಯವಸ್ಥೆ ಮಾಡುತ್ತಿರುವ ಜಾಲಪ್ಪನವರಿಗೆ ಆರೋಗ್ಯ,ಆಯಸ್ಸು ದೇವರು ನೀಡಲಿ ಎಂದು ಕೋರಿದರು.
ಅಂತರ ಗಂಗೆ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಸ್.ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯಲ್ಲಿ ೫೮ ಮಂದಿ ಬುದ್ಧಿಮಾಂದ್ಯ ಮಕ್ಕಳು ಹಾಗೂ ೨೦ ಮಂದಿ ವಯೋವೃದ್ದರು ವಾಸಮಾಡುತ್ತಿದ್ದಾರೆ. ದಾನಿಗಳು ಇನ್ನೂ ಹೆಚ್ಚಿನ ಸಹಕಾರ ನೀಡಿದರೆ ಸೇವೆ ಸಲ್ಲಿಸಲು ತಾವು ಸದಾ ಸಿದ್ದವಿರುವುದಾಗಿ ಅವರು ತಿಳಿಸಿದರು.
ದೇವರಾಜ ಅರಸು ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರೀಸರ್ಚ್ ಸೆಂಟರ್ ನ ಟ್ರಸ್ಟಿ ಡಾ.ಎಸ್.ಕುಮಾರ್ ಮಾತನಾಡಿ,  ಅಂತರಗಂಗಾ ಸಂಸ್ಥೆಯ ಎಲ್ಲಾ ಮಕ್ಕಳಿಗೆ ಹಾಗೂ ವೃದ್ದರಿಗೆ ಮತ್ತು ಸಿಬ್ಬಂದಿಗೆ  ಜಾಲಪ್ಪ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡುವುದಾಗಿ ತಿಳಿಸಿ, ಅಗತ್ಯವಿರುವ ಹಾಸಿಗೆಗಳನ್ನು ಇನ್ನು ಒಂದು ವಾರದಲ್ಲಿ ಪೂರೈಸುವುದಾಗಿ ಅವರು ಹೇಳಿದರು.
ಬೆಳ್ಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಆರ್.ಎಲ್.ಜಾಲಪ್ಪ ಅವರು ಹಾಗೂ ಸಂಸದ ಮುನಿಸ್ವಾಮಿ ರವರು ನೆನಪಿಗಾಗಿ ಗಿಡನೆಡುವ ಮೂಲಕ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ದೇವರಾಜ್ ಅರಸು ವೈದ್ಯಕೀಯ ವಿಶ್ವ ವಿದ್ಯಾಲಯದ ಎಸ್ ಕುಮಾರ್, ಆರ್ ರಾಜೇಂದ್ರ, ಕೆ.ಜಿ.ಹನುಮಂತ ರಾಜು, ಎನ್.ಉದಯ್,  ಎನ್.ಅರವಿಂದ ಹರಿಶ್ಚಂದ್ರ,  ಮೃಣಾಲಿನಿ, ಪ್ರದೀಪ್ ಕುಮಾರ್, ಕೆ.ಎನ್.ವಿ.ಪ್ರಸಾದ್, ಪಿ.ಎನ್.ಶ್ರೀರಾಮುಲು, ಕೋದಂಡರಾಮಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಎಂಜಿ.ಪಾಲಿ , ಅಂಗವಿಕಲರ ಕಲ್ಯಾಣ ಇಲಾಖೆಯ  ಮುನಿರಾಜು, ಹನುಮಂತ ರಾವ್, ಕಟ್ಟಡದ ರೂವಾರಿ ಆರ್ ಆರ್ ಇನ್ಫಾ ಕಂಪನಿಯ ರಂಜಿತ್, ರಾಜೇಂದ್ರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಅಂತರಗಂಗ ವಿದ್ಯಾ ಸಂಸ್ಥೆಯ ಶಂಕರ್ ನಿರೂಪಿಸಿದ ಕಾರ್ಯಕ್ರಮದಲ್ಲಿ, ಪ್ರಜ್ಞಾ ಶಂಕರ್ ಪ್ರಾರ್ಥಿಸಿ ಕೆಂಬೋಡಿ ಮಂಜುನಾಥ್ ಸ್ವಾಗತಿಸಿ, ನಿರೂಪಿಸಿದರು. ಇದೇ ಸಂದರ್ಭದಲ್ಲಿ ಅವಿನಾಶ್ ಕಲಾ ಬಳಗದ ಪದ್ಮಾ ಅಮರ್ ನಾಥ್, ಜಾನಪದ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಮತ್ತಿಕುಂಟೆ ಕೃಷ್ಣ, ಸುವರ್ಣ, ಕಲಾವಿದ ಸೋಮಣ್ಣರವರಿಂದ ಗಾಯನ ಕಾರ್ಯಕ್ರಮ ನಡೆಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss