Thursday, July 7, 2022

Latest Posts

ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ಮತ್ತೆ ಮೂವರಿಗೆ ಕೊರೋನಾ ದೃಢ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 57 ಕ್ಕೆ ಏರಿಕೆ

ಬಳ್ಳಾರಿ: ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಮತ್ತೇ ಮೂವರಿಗೆ ಹೆಮ್ಮಾರಿ ಕೊರೋನಾ ಸೊಂಕು ವಕ್ಕರಿಸಿದ್ದು, ಸೊಂಕಿತರ ಸಂಖ್ಯೆ ಜಿಲ್ಲೆಯಲ್ಲಿ ೫೭ಕ್ಕೆ ಎರಿಕೆಯಾಗಿದೆ. ಕಳೆದ ಕೆಲ ದಿನಗಳ ಹಿಂದೆ ಜಿಂದಾಲ್ ಕಂಪನಿ ನೌಕರರಿಬ್ಬರಿಗೆ ಹೆಮ್ಮಾರಿ ಸೊಂಕು ವಕ್ಕರಿಸಿತ್ತು. ಕೂಡಲೇ ಅವರನ್ನು ಜಿಲ್ಲಾ ಕೊವೀಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ವಾಸವಿದ್ದ ವಸತಿ ಗೃಹ ಪ್ರದೇಶವನ್ನು ಸಿಲ್ ಡೌನ್ ಮಾಡಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೊಂಕಿತ ಕುಟುಂಬದ ಸದಸ್ಯರನ್ನು ಹಾಗೂ ಸಂಪರ್ಕಿತರನ್ನು ಕ್ವಾರೆಂಟ್ಯನ್ ಮಾಡಿ, ಅವರ ಗಂಟಲು ದ್ರವದ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಮೂವರಿಗೆ ಸೊಂಕು ಇರುವುದು ದ್ರಢಪಟ್ಟಿದೆ. ಇವರನ್ನು ನಗರದ ಜಿಲ್ಲಾ ಕೊವೀಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ವಚ್ವತೆ ಹಾಗೂ ತಪಾಸಣೆಗೆ ಮುಂದಾದ ಜಿಂದಾಲ್: ಜಿಂದಾಲ್ ಉಕ್ಕು ಕಾರ್ಖಾನೆಯ ನೌಕರರಿಬ್ಬರು ಜಾಗೂ ಅವರ ಮೂವರು ಸಂಬಂಧಿಕರಲ್ಲಿ ಸೊಂಕು ಪತ್ತೆಯಾದ ಹಿನ್ನೆಲೆಯಲ್ಲಿ ಒಡೀ ಕಂಪನಿಯ ನೌಕರರು ಹಾಗೂ ಕಾರ್ಮಿಕರಲ್ಲಿ ಆತಂಕ ಮನೆ ಮಾಡಿದೆ. ಇದನ್ನು ಗಮನಿಸಿದ ಕಂಪನಿ ಮುಖ್ಶಸ್ಥರಾದ ವಿನೋದ್ ನಾವೆಲ್ ಅವರು ತಾವೇ ತಪಾಸಣೆ ಸೇರಿದಂತೆ ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ. ಕಂಪನಿಯಲ್ಲಿ ಮೊದಲ ಪಾಸಿಟಿವ್ ಪ್ರಕರಣ ಪತ್ತೆಯಾದ ಬಳಿಕ ಸಂಸ್ಥೆಯ ಎಂಡಿ ನಾವೇಲ್ ಅವರು ಜಿಂದಾಲ್ ನಲ್ಲೆ ಮೊಕ್ಕಾಂ ಹಾಡಿದ್ದಾರೆ. ತಾವೇ ಖುದ್ದು ಎದುರು ನಿಂತು ನೌಕರರಿಗೆ ಹಾಗೂ ಕಾರ್ಮಿಕರಿಗೆ ಸ್ಯಾನಿಟೈಜೇಷನ್ ಮತ್ತು ಆರೋಗ್ಯ ತಪಾಸಣೆ ಮಾಡಿಸಲು ಮುಂದಾಗಿದ್ದಾರೆ. ಎಲ್ಲಾ ಕಾರ್ಮಿಕರಿಗೆ ಥರ್ಮಲ್ ಟೆಸ್ಟ್ ಮತ್ತು ಸ್ಕ್ರೀನಿಂಗ್ ಮಾಡಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss