spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜಿಂದಾಲ್ ನಂಜು ಕಡಿಮೆಯಾಗದಿದ್ದರೆ ಮುಲಾಜಿಲ್ಲದೇ ಕಂಪನಿ ಸೀಲ್ ಡೌನ್: ಸಚಿವ ಆನಂದ್ ಸಿಂಗ್

- Advertisement -Nitte

ಬಳ್ಳಾರಿ: ಜಿಂದಾಲ್ ನಂಜು ನಿಯಂತ್ರಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಈ ಕುರಿತು ಕಂಪನಿ ಅವರೂ ಭರವಸೆ ನೀಡಿದ್ದಾರೆ. ಒಂದು ವೇಳೆ ಸಂಖ್ಯೆ ಹೆಚ್ಚಳವಾದರೇ ಸಿ.ಎಂ.ಯಡಿಯೂರಪ್ಪ ಅವರೊಂದಿಗೆ ಚೆರ್ಚಿಸಿ ಮುಲಾಜಿಲ್ಲದೇ ಕಂಪನಿ ಸೀಲ್ ಡೌನ್ ಮಾಡಲಾಗುವುದು ಎಂದು ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಎಚ್ಚರಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು. ಜನರಲ್ಲಿ ಜಿಂದಾಲ್ ಬಗ್ಗೆ ಭಯ, ಆತಂಕ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಜಿಂದಾಲ್ ಮುಖ್ಯಸ್ಥ ವಿನೋದ್ ನಾವೆಲ್ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವೆ. ಹೆಮ್ಮಾರಿ ನಿಯಂತ್ರಿಸಲು ಜಿಲ್ಲಾಡಳಿತ ದೊಂದಿಗೆ ನಾವೂ ಕೈಜೋಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಪರೀಕ್ಷೆ ಮಾಡುವುದು ಸೇರಿದಂತೆ ಕ್ವಾರಂಟೈನ್ ವ್ಯವಸ್ಥೆಯನ್ನು ನೀವೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ, ಇದಕ್ಕೆ ಅವರೂ ಒಪ್ಪಿದ್ದು, ಇಷ್ಟಾದರೂ ಸಂಖ್ಯೆ ಹೆಚ್ಚಳ ವಾದರೇ, ಮುಲಾಜಿಲ್ಲದೇ ಕಂಪನಿ ಸೀಲ್ ಡೌನ್ ಮಾಡಲಾಗುವುದು ಎಂದು ಎಚ್ಚರಿಸಿದರು. ನಮಗೆ ಜನರ ಆರೋಗ್ಯ ಮುಖ್ಯ, ಹೆಚ್ಚು ಕಡಿಮೆಯದರೇ ಜನರೋಂದಿಗೆ ನಾವು ನಾನಾ ಟೀಕೆಗೆ ಗುರಿಯಾಗಬೇಕಾಗಲಿದೆ. ಹೆಮ್ಮಾರಿ ಕೊರೋನಾ ವಿಚಾರಕ್ಕೆ ಸಂಬಂಧಿಸಿದಂತೆ ಜಿಂದಾಲ್ ಬಗ್ಗೆ ನಾನಾ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಸರ್ಕಾರದ ನಿಯಮಗಳನ್ನು ಪಾಲಿಸುವದರ ಜತೆಗೆ ಹೆಮ್ಮಾರಿ ನಿಯಂತ್ರಣಕ್ಕೆ ಕಂಪನಿಯವರೂ ಶ್ರಮಿಸಬೇಕಿದೆ. ನಿರ್ಲಕ್ಷಿಸಿದರೇ ಮುಲಾಜಿಲ್ಲದೇ ಕಂಪನಿ ಸೀಲ್ ಡೌನ್ ಮಾಡಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ 509 ಕೊವೀಡ್ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 7 ಜನ ಸೊಂಕಿತರು ಮೃತಪಟ್ಟಿದ್ದಾರೆ. 509 ರಲ್ಲಿ 296 ಪ್ರಕರಣಗಳು ಜಿಂದಾಲ್ ಸಂಬಂಧಿಸಿದ್ದಾಗಿವೆ. ಇದರಲ್ಲಿ 73 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬರುವ ದಿನಗಳಲ್ಲಿ ಸಂಖ್ಯೆ ಹೆಚ್ಚಾಗದಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿರುವೆ. ಹೆಚ್ಚಾದರೆ, ಕಂಪನಿ ಅವರು ನಿರ್ಲಕ್ಷಿಸಿಸಿದರೆ ಖಂಡಿತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss