Monday, August 15, 2022

Latest Posts

ಜಿಐಸಿ, ಟಿಪಿಜಿ ಕ್ಯಾಪಿಟಲ್’ನಿಂದ ರಿಲಯನ್ಸ್​ನಲ್ಲಿ ಒಂದೇ ದಿನ 7,350 ಕೋಟಿ ರೂ. ಹೂಡಿಕೆ

ನವದೆಹಲಿ: ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್ (ಆರ್​ಐಎಲ್)ಗೆ ಶುಕ್ರವಾರ ಒಂದೇ ದಿನ 7,350 ಕೋಟಿ ರೂ. ಹೂಡಿಕೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಿಲಯನ್ಸ್​ ಸಂಸ್ಥೆಗೆ ವಿಶ್ವಾದ್ಯಂತ ಹೂಡಿಕೆ ಹರಿದುಬರುತ್ತಿದೆ.

ನಿನ್ನೆ ಸಿಂಗಾಪುರ ಮೂಲದ ಜಿಐಸಿ ಮತ್ತು ಟಿಪಿಜಿ ಕಂಪನಿ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಭಾಗವಾಗಿರುವ ರಿಲಯನ್ಸ್​ ರೀಟೇಲ್ ಯುನಿಟ್​ನಲ್ಲಿ ಒಟ್ಟು 7,35 ಕೋಟಿ ರೂ. ಹೂಡಿಕೆ ಮಾಡಿವೆ.

ರಿಲಯನ್ಸ್​ ರೀಟೇಲ್ ವೆಂಚರ್ಸ್​ ಲಿಮಿಟೆಡ್​ನಲ್ಲಿ ಜಿಐಸಿ 5,512.5 ಕೋಟಿ ರೂ. ಹೂಡಿಕೆ ಮಾಡಿದೆ.  ಶೇಕಡಾ 1.22ರ ಷೇರುಗಳ ಮೊತ್ತದಲ್ಲಿ ಹೂಡಿಕೆ ಮಾಡಿದರೆ, ಟಿಪಿಜಿ 1,837.5 ಕೋಟಿ ರೂಪಾಯಿಗಳೊಂದಿಗೆ ಶೇಕಡಾ 0.41ರಷ್ಟು ಬಡ್ಡಿಯನ್ನು ಪಡೆದಿದೆ ಎಂದು ಕಂಪೆನಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಎರಡು ದಿನಗಳ ಹಿಂದೆ ಅಬುಧಾಬಿ ಮೂಲದ ಮುಬದಾಲ ಇನ್ವೆಸ್ಟ್​ಮೆಂಟ್ ಕಂಪನಿ ರಿಲಯನ್ಸ್​ ರೀಟೇಲ್ ವೆಂಚರ್ಸ್​ನಲ್ಲಿ 6,247.50 ಕೋಟಿ ರೂ ಹೂಡಿಕೆ ಮಾಡಿತ್ತು. ಈ ಹೂಡಿಕೆಯೊಂದಿಗೆ ಮುಬಾದಲಾ ರಿಲಯನ್ಸ್ ರೀಟೇಲ್​ನ ಶೇ. 1.4ರಷ್ಟು ಪಾಲನ್ನು ಖರೀದಿಸಿತ್ತು. ವಿಶ್ವದ ಅನೇಕ ಪ್ರಮುಖ ಹೂಡಿಕೆ ಸಂಸ್ಥೆಗಳಿಂದ ಬಂಡವಾಳ ಆಕರ್ಷಿಸುತ್ತಿರುವ ರಿಲಯನ್ಸ್ ರೀಟೇಲ್​ನ ವ್ಯವಹಾರ ದಿನೇ ದಿನೇ ಪ್ರಬಲಗೊಳ್ಳುತ್ತಿದೆ. ದೇಶಾದ್ಯಂತ 12 ಸಾವಿರ ಮಳಿಗೆಗಳೊಂದಿಗೆ ರಿಲಯನ್ಸ್ ರೀಟೇಲ್ ವ್ಯವಹಾರ ಹೊಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss