Wednesday, August 17, 2022

Latest Posts

ಜಿಡ್ಡು ಜಿಡ್ಡು ತಲೆ ಕೂದಲು ನಿಮಗಿದೆಯೇ? ಹಾಗಿದ್ದರೆ ಈ ಮನೆಮದ್ದುಗಳನ್ನು ನೀವು ಖಂಡಿತ ಟ್ರೈ ಮಾಡಬೇಕು

ಕೂದಲ ಆರೋಗ್ಯ ಕಾಪಾಡಿಕೊಳ್ಳುವುದರಲ್ಲಿ ಎಲ್ಲರೂ ಒಂದು ಕೈ ಮುಂದಿರುತ್ತಾರೆ. ಆದರೆ ಜಿಡ್ಡು ಹಿಡಿಯದೆ, ಸ್ವಚ್ಛವಾಗಿ ಹಾರಾಡುತ್ತಾ ಫ್ರೆಶ್ ಆಗಿರುವ ಕೂದಲು ಪಡೆಯೂಕೆ ದೊಡ್ಡ ಸಮಸ್ಯೆಯಾಗಿರುತ್ತೆ. ಹಾಗಿದ್ದರೆ ಚಿಂತಿಸಬೇಡಿ ಈ ಮನೆಮದ್ದುಗಳನ್ನು ಟ್ರೈ ಮಾಡಿ ನೋಡಿ..

ಲಿಂಬು ರಸ: ಸ್ನಾನದ ಬಳಿಕ ನೀರಿಗೆ 2 ಹನಿ ಲಿಂಬೆ ರಸ ಬಳಸಿ ಕೂದಲಗೆ ಹಚ್ಚಿಕೊಳ್ಳಿ ನಂತರ ಕೊನೆಯದಾಗಿ ತಣ್ಣೀರಿನಿಂದ ಕೂದಲು ತೊಳೆದುಕೊಳ್ಳುವುದರಿಂದ ಕೂದಲು ಜಿಡ್ಡು ಹಿಡಯೋದು ಕಡಿಮೆಯಾಗುತ್ತದೆ.

ಅಲೋವೆರಾ: ಸ್ನಾನಕ್ಕೂ ಮುಂಚೆ ತಲೆಗೆ ಅಲೋವೆರಾ ಹಚ್ಚಿ ಮಸಾಜ್ ಮಾಡಿಕೊಂಡು ಸುಮಾರು 20 ನಿಮಿಷದ ಬಳಿಕ ಸ್ನಾನ ಮಾಡುವುದರಿಂದ ಜಿಡ್ಡು ಕಡಿಮೆಯಾಗುತ್ತದೆ.

ಪೌಡರ್:  ತಲೆ ಸ್ನಾನ ಮಾಡಿ ಒಣಗಿಸಿಕೊಳ್ಳಲು ಸಮಯವಿಲ್ಲದಿದ್ದರೆ, ಬೇಬಿ ಪೌಡರ್ ಅಥವಾ ಯಾವುದೇ ಟಾಲ್ಕಂ ಪೌಡರ್ ಗಳನ್ನು ಕೂರಲಿಗೆ ಹಾಕಿಕೊಳ್ಳುವುದರಿಂದ ಜಿಡ್ಡು ಕ್ಷಣಮಾತ್ರದಲ್ಲಿ ಹೋಗುತ್ತದೆ.

ಕೂದಲನ್ನು ಮುಟ್ಟುತ್ತಿರಬೇಡಿ: ತಲೆ ಕೂದಲನ್ನು ಆಗಾಗ ಮುಟ್ಟುವುದರಿಂದ ಅಥವಾ ಹೆಚ್ಚು ಬಾಚುವುದರಿಂದಲೂ ಕೂದಲು ಜಿಡ್ಡಾಗುತ್ತದೆ.

ಆಗಾಗ ತಲೆ ಸ್ನಾನ ಮಾಡಿ:  ಕೆಲವರಿಗೆ ಕೂದಲೂ ಒಂದೆ ದಿನಕ್ಕೆ ಜಿಡ್ಡು ಹಿಡಿದು ಡಲ್ ಆಗಿ ಕಾಣುತ್ತದೆ. ಅಂತವರು ಪ್ರತಿದಿನ ತಲೆ ಸ್ನಾನ ಮಾಡಿದರೂ ಪರವಾಗಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!