Wednesday, August 10, 2022

Latest Posts

ಕೊಲೆ ಪ್ರಕರಣ: ಸಿಬಿಐ ವಶಕ್ಕೆ ಮಾಜಿ‌ ಸಚಿವ ವಿನಯ ಕುಲಕರ್ಣಿ

ಧಾರವಾಡ: ಜಿಲ್ಲಾ ಪಂಚಾಯತ ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣ ಕುರಿತಂತೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಗುರುವಾರ ಬೆಳಂಬೆಳಿಗ್ಗೆ ಇಲ್ಲಿನ ಬಾರಾಕೂಟ್ ದಲ್ಲಿ ಇರುವ ಅವರ ಮನೆಯಲ್ಲಿ ಸಿಬಿಐ ಅಧಿಕಾರಿಗಳು ಮಾಜಿ ಸಚಿವ ವಿನಯ ಕುಲಕರ್ಣಿ ವಶಕ್ಕೆ ಪಡೆದು ಉಪನಗರ ಠಾಣೆಗೆ ಕರೆದೊಯ್ದು, ವಿಚಾರಣೆ ನಡೆಸಲಿದ್ದಾರೆ.

ಜಿಪಂ ಸದಸ್ಯ ಯೋಗೇಶಗೌಡ ಹತ್ಯೆಯಾದ ದಿನದಿಂದ ಮಾಜಿ ಸಚಿವರ ಹೆಸರು ತಳುಕು ಹಾಕಿಕೊಂಡಿತ್ತು. ಹತ್ಯೆಯಲ್ಲಿ ಸುಮಾರು ಜನರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಇದೀಗ ಮಾಜಿ ಸಚಿವ ವಿಚಾರಣೆ ನಡೆದಿದೆ. ಪ್ರಕರಣ ಯಾವ ಹಂತ ತಲುಪಲಿದೆ ಕಾದುನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss