spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜಿಲ್ಲಾಧಿಕಾರಿ ಜಿ. ಜಗದೀಶ ಅವರಿಗೆ ರಾಖಿ ಕಟ್ಟಿ ರಕ್ಷಾಬಂಧನ ಆಚರಿಸಿಕೊಂಡ ಕೊರೋನಾ ವಾರಿಯರ್ ಉಡುಪಿಯ ರಾಜೀವಿ!

- Advertisement -Nitte

ಉಡುಪಿ: ಖುದ್ದು ಭಾರತದ ಉಪ ರಾಷ್ಟ್ರಪತಿ ಅವರಿಂದಲೇ ಪ್ರಶಂಸಿಲ್ಪಟ್ಟ ಕೊರೋನಾ ವಾರಿಯರ್ ಉಡುಪಿಯ ರಾಜೀವಿ ಅವರು ಜಿಲ್ಲಾಧಿಕಾರಿ ಜಿ. ಜಗದೀಶ ಅವರಿಗೆ ರಾಖಿ ಕಟ್ಟಿ ರಕ್ಷಾಬಂಧನ ಆಚರಿಸಿಕೊಂಡಿದ್ದಾರೆ.
ಹಿರಿಯಡ್ಕ ಸಮೀಪದ ಪೆರ್ಣಂಕಿಲದಿಂದ ತುಂಬು ಗರ್ಭಿಣಿಯನ್ನು ರಾತ್ರಿ 3 ಗಂಟೆಗೆ ರಾಜೀವಿ ಉಡುಪಿ ನಗರದ ಆಸ್ಪತ್ರೆಗೆ ಸೇರಿಸಿ ಕರ್ತವ್ಯ ಪಾಲಿಸಿದ್ದರು. ತಾನೇ ಆಟೋ ಚಲಾಯಿಸಿಕೊಂಡು ಹೋದ ಮಹಿಳೆಯ ದಿಟ್ಟತನ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿತ್ತು.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಜನಪ್ರತಿನಿಧಿಗಳು ರಾಜೀವಿ ಕಾರ್ಯ ಶ್ಲಾಘಿಸಿ ಮಾದರಿ ಮಹಿಳೆ ಎಂದು ಬೆನ್ನು ತಟ್ಟಿದ್ದರು.
ಡಿ.ಸಿ.ಗೆ ರಾಖಿ ಕಟ್ಟಿದ ರಾಜೀವಿ, ನನ್ನ ಕೆಲಸವನ್ನು ಡಿ.ಸಿ. ಗುರುತಿಸಿ ಪ್ರೋತ್ಸಾಹದ ಮಾತುಗಳನ್ನಾಡಿದ್ದರು. ಆಶಾ ಕಾರ್ಯಕರ್ತೆಯರಿಗೆ ಆರಂಭದಿಂದಲೂ ಜಿಲ್ಲಾಧಿಕಾರಿ ಬೆನ್ನೆಲುಬಾಗಿ ನಿಂತಿದ್ದಾರೆ, ಅವರಿಗೆ ರಾಖಿ ಕಟ್ಟಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದೆ ಎಂದಿದ್ದಾರೆ.
ರಾಜೀವಿ ಗರ್ಭಿಣಿಯನ್ನು ರಾತ್ರಿ ಆಟೋ ಚಲಾಯಿಸಿ ಆಸ್ಪತ್ರೆಗೆ ಸೇರಿಸಿದ ದಿಟ್ಟ ಆಶಾ ಕಾರ್ಯಕರ್ತೆ. ಅವರು ರಾಖಿ ಕಟ್ಟಿದ ಕ್ಷಣ ನಾನು ಭಾವುಕನಾದೆ. ನಿಜಕ್ಕೂ ಕೊರೋನಾ ಎದುರಿಸಲು ಇನ್ನಷ್ಟು ಧೈರ್ಯ ಬಂದಿದೆ ಎಂದು ಜಿಲ್ಲಾಧಿಕಾರಿ ತಮ್ಮ ಫೇಸ್ ಬುಕ್ ಪೇಜಲ್ಲಿ ಬರೆದುಕೊಂಡಿದ್ದಾರೆ.
ಇಂದು ಕೂಡ ರಾಜೀವಿ ಬೆಳಗ್ಗೆ ಆಶಾ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸಿ ಕೆಲಸದ ಅವಧಿ ಮುಗಿಸಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ರಕ್ಷೆ ಕಟ್ಟಿ ವಾಪಸ್ ಬಾಡಿಗೆ ಮಾಡಲು ತೆರಳಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss