spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜಿಲ್ಲಾ ನ್ಯಾಯಾಧೀಶ ಉಮೇಶ ಅಡಿಗ ಕರೆ: ಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಕೈಜೋಡಿಸಿ

- Advertisement -Nitte

ಧಾರವಾಡ: ಅರಣ್ಯ ಸಂರಕ್ಷಣೆಗೆ ಎಲೆಮರೆಯ ಕಾಯಿಯಂತೆ ಅರಣ್ಯ ಇಲಾಖೆ ಸಿಬ್ಬಂದಿ ಶ್ರಮಿಸುತ್ತಾರೆ. ಅರಣ್ಯಕ್ಕಾಗಿ ಬಲಿದಾನ ಮಾಡಿದ ಮಹನೀಯರು ಧನ್ಯರು. ದೇಶದ ಪ್ರಜೆಗಳಾಗಿ ನಾವು ಅರಣ್ಯ ರಕ್ಷಕರೊಂದಿಗೆ ಅರಣ್ಯ ಕಾಪಾಡಲು ಕೈ ಜೋಡಿಸಲು ಜಿಲ್ಲಾ ನ್ಯಾಯಾಧೀಶ ಉಮೇಶ ಅಡಿಗ ಕರೆ ನೀಡಿದರು.

ನಗರದ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಶುಕ್ರವಾರ ರಾಷ್ಟಿçಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತ್ಮಾತರಿಗೆ ಗೌರವ ಸಲ್ಲಿಸಿ ಮಾತನಾಡಿದ ಅವರು, ಮನುಷ್ಯನ ಸ್ವಾರ್ಥ ನಿಲ್ಲಬೇಕು ಎಂದರು.

ಉತ್ತಮ ಆಹಾರ, ಒಳ್ಳೆಯ ವಾಯು, ಫಲವತ್ತಾದ ಮಣ್ಣು ದೊರಕಲು ಅರಣ್ಯವೇ ಕಾರಣ. ಅರಣ್ಯವನ್ನು ನಾವು ಕಾಪಾಡಿದರೆ ಮಾತ್ರ ಅದು ನಮ್ಮನ್ನು ಕಾಪಾಡುತ್ತದೆ ಎಂದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಅರಣ್ಯ ನಾಶದಿಂದ ಅಭಿವೃದ್ಧಿ ಕುಂಠಿತವಾಗುತ್ತದೆ. ನೈಸರ್ಗಿಕ ಸಂಪತ್ತಿನ ಅಸಮತೋಲನದಿಂದಾಗಿ ನಿಸರ್ಗದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಅರಣ್ಯ ಸಂಪತ್ತು, ವನ್ಯಜೀವಿಗಳು ಮಾನವ ಕುಲದ ಒಂದು ಭಾಗ. ಪರಸ್ಪರ ಪೂರಕವಾಗಿ ಬದುಕಿದರೆ ಮಾನವ ಜೀವಿಗಳಿಗೆ ಉಳಿಗಾಲವಿದೆ ಎಂದರು.

ಅರಣ್ಯ ಸಂಪತ್ತಿನ ಸಂರಕ್ಷಣೆಗಾಗಿ ಮಡಿದ, ಅರಣ್ಯ ಇಲಾಖೆ ಅಧಿಕಾರಿ-ಸಿಬ್ಬಂದಿಗೆ ರಾಷ್ಟಿçಯ ಅರಣ್ಯ ಹುತಾತ್ಮರ ದಿನದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ನ್ಯಾಯಾಧೀಶರು ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಧಾರವಾಡ ಅರಣ್ಯ ವಿಭಾಗದ ಓರ್ವ ಸಿಬ್ಬಂದಿ ಸೇರಿ ರಾಜ್ಯದ ೪೪ ಸಿಬ್ಬಂದಿಗೆ ಪುಷ್ಪ ನಮನ ಸಲ್ಲಿಸಿದರು.

ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ, ಅರಣ್ಯ ಸೇವೆ ಅಧಿಕಾರಿಗಳಾದ ಕೆ.ಟಿ.ಹನಮಂತಪ್ಪ, ಕೃಷ್ಣ ಭಾಜಪೇಯಿ, ದೀಪಿಕಾ ಭಾಜಪೇಯಿ, ಸೋನಲ್ ವೃಷ್ಣಿ, ಉಪ ಪೊಲೀಸ್ ಆಯುಕ್ತ ಕೃಷ್ಣಕಾಂತ ಜಿ, ಉಪವಿಭಾಗಾಧಿಕಾರಿ ಡಾ.ಗೋಪಾಲ ಕೃಷ್ಣ ಬಿ. ಅರಣ್ಯ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss