Sunday, June 26, 2022

Latest Posts

ಜಿಲ್ಲೆಯಲ್ಲಿ 46 ಜನರಲ್ಲಿ ಕೊರೋನಾ ಸೋಂಕು ದೃಢ, 46 ಜನರು ಸೋಂಕಿನಿಂದ ಗುಣಮುಖ

ಹಾವೇರಿ: ಇಬ್ಬರು ಆರೋಗ್ಯ ಇಲಾಖೆಯ, ಇಬ್ಬರು ಶಿಕ್ಷಣ ಇಲಾಖೆಯ ಹಾಗೂ ಓರ್ವ ಪೊಲೀಸ್ ಇಲಾಖೆಯ ಸಿಬ್ಬಂದಿ ಸೇರಿ ಒಟ್ಟು ೪೬ ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶಟ್ಟಣ್ಣನವರ ತಿಳಿಸಿದ್ದಾರೆ.
ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ೨, ಹಾನಗಲ್ ೫, ಹಾವೇರಿ ೧೮, ಹಿರೇಕೆರೂರ ೩, ರಾಣೇಬೆನ್ನೂರ ೪, ಸವಣೂರ ೫, ಶಿಗ್ಗಾಂವ ತಾಲೂಕಿನಲ್ಲಿನ ೩ ಜನರಲ್ಲದೆ ಇತರೆ ಇಬ್ಬರು ಜನರಲ್ಲಿ ಸೋಂಕು ದೃಢಗೊಂಡಿದೆಯಲ್ಲದೆ ಇಂದು ನಾಲ್ವರು ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಎರಡುವರೆ ಸಾವಿರ ಸಂಖ್ಯೆಯನ್ನು ದಾಡಿದ ಕೊರೋನಾ ಸೋಂಕಿತರ ಸಂಖ್ಯೆ. ಸೋಮವಾರ ೪೬ ಜನ ಸೋಂಕಿತರನ್ನು ಸೇರಿ ಈವರೆಗೆ ೨೫೨೫ ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಂತಾಗಿದೆ. ಈವರೆಗೆ ೧೬೬೦ ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ, ಸೋಮವಾರ ಮರಣಹೊಂದಿದ ನಾಲ್ವರು ಸೇರಿ ಈವರೆಗೆ ಮರಣಹೊಂದಿದವರ ಸಂಖ್ಯೆ ೫೬ಕ್ಕೆ ಏರಿದಂತಾಗಿದೆ.
ಕೊರೋನಾ ಸೋಂಕಿತ ೪೧೦ ಹೋಂ ಐಸೋಲೇಷನ್‌ದಲ್ಲಿರುವ ಮತ್ತು ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿರುವ ೩೯೯ ಜನರು ಸೇರಿ ಒಟ್ಟು ೮೦೯ ಜನರಲ್ಲಿ ಕೊರೋನಾ ಸೋಂಕು ಸಕ್ರೀಯವಾಗಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss