ಹಾವೇರಿ: ವಕೀಲ, ಶೂಶ್ರೂಷಕಿ, ಆಹಾರ, ಆರೋಗ್ಯ, ಶಿಕ್ಷಣ ಇಲಾಖೆ ಉದ್ಯೋಗಿ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ ೬೫ ಜನರಿಗೆ ಕೋವಿಡ್-೧೯ ದೃಢಪಟ್ಟಿದೆ ಹಾಗೂ ೧೦೩ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ೪೩೨೪ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ ೨೯೮೧ ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ ಹಾಗೂ ಇಂದಿನ ಐದು ಪ್ರಕರಣ ಸೇರಿ ಈವರೆಗೆ ೧೦೯ ಜನರು ಕೋವಿಡ್ನಿಂದ ಮೃತಪಟ್ಟಿದ್ದಾರೆ. ೧೨೩೪ ಸಕ್ರಿಯ ಪ್ರಕರಣಗಳಿವೆ(೮೫೭ ಸೋಂಕಿತರು ಹೋಂ ಐಸೋಲೇಷನ್ನಲ್ಲಿ ಹಾಗೂ ೩೭೭ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ).
ಜಿಲ್ಲೆಯ ಸವಣೂರ ತಾಲೂಕಿನಲ್ಲಿ ೨, ಶಿಗ್ಗಾಂವಿ ಹಾಗೂ ರಾಣೇಬೆನ್ನೂರು ತಲಾ ೪, ಹಾವೇರಿ ೩೨, ಬ್ಯಾಡಗಿ ೭, ಹಾನಗಲ್ ೪, ಹಿರೇಕೆರೂರು ತಾಲೂಕಿನಲ್ಲಿ ೧೨ ಜನರಿಗೆ ಸೋಂಕು ದೃಢಪಟ್ಟಿದೆ.
ಸವಣೂರು ೨೮, ಹಾವೇರಿ ೪೨, ಬ್ಯಾಡಗಿ ೨೪ ಹಾಗೂ ಹಾನಗಲ್ ತಾಲೂಕಿನ ೯ ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಹಾವೇರಿ ತಾಲೂಕು ಗುತ್ತಲ ನಿವಾಸಿ ೫೨ವರ್ಷದ ಪುರುಷ, ಹಾವೇರಿ ವಿದ್ಯಾನಗರದ ೬೨ ವರ್ಷದ ಮಹಿಳೆ, ರಾಣೇಬೆನ್ನೂರ ಶ್ರೀನಗರದ ನಿವಾಸಿ ೫೪ ವರ್ಷದ ಪುರುಷ, ಕರ್ಜಗಿ ಗ್ರಾಮದ ೬೯ ವರ್ಷದ ಪುರುಷ, ಹಾವೇರಿ ಅಂಬೇಡ್ಕರ ನಗರದ ನಿವಾಸಿ ೭೩ ವರ್ಷದ ಪರುಷು ಸೇರಿದಂತೆ ಐದು ಜನರ ಮರಣವನ್ನು ಇಂದು ದೃಢಿಕರಿಸಲಾಗಿದೆ ಎಂದರು ಅವರು ತಿಳಿಸಿದ್ದಾರೆ.