Tuesday, June 28, 2022

Latest Posts

ಜಿಲ್ಲೆಯಲ್ಲೀಗ ಗಡಗಡ: ಭಟ್ಕಳ ಜೊತೆ ಕುಮಟಾಕ್ಕೂ ಹೆಜ್ಜೆ ಇಟ್ಟ ಮಾರಿ

ಕಾರವಾರ: ಎರಡು ದಿನಗಳ ವಿರಾಮದ ನಂತರದಲ್ಲಿ ಬುಧವಾರ ಉ.ಕ ಜಿಲ್ಲೆಯಲ್ಲಿ ಎರಡು ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೂ ಭಟ್ಕಳಕ್ಕಷ್ಟೇ ಸೀಮಿತವಾಗಿದ್ದ ಈ ಮಹಾಮಾರಿ ಈಗ ಕುಮಟಾ ತಾಲೂಕಿಗೂ ವಕ್ಕರಿಸುವ ಮೂಲಕ ಜಿಲ್ಲೆ ತಲ್ಲಣಗೊಳ್ಳುವಂತಾಗಿದೆ.

ಕುಮಟಾದಲ್ಲಿ ಕ್ವಾರಂಟೈನ್ ನಲ್ಲಿದ್ದ 26 ವರ್ಷದ ಪುರುಷನಲ್ಲೀಗ ಕೊರೋನಾ ದೃಢಪಟ್ಟಿದೆ. ಈತ ಮಹಾರಾಷ್ಟ್ರದ ರತ್ನಾಗಿರಿಯಿಂದ ಮೇ. 5 ರಂದು ಬಂದು ಇಲ್ಲಿಯ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಗೆ ಒಳಗಾಗಿದ್ದ. ಈತನ ಗಂಟಲ ದ್ರವವನ್ನು ಪರೀಕ್ಷೆ ಗೆ ಕಳಿಸಲಾಗಿತ್ತು. ಅದೀಗ ಪಾಸಿಟಿವ್ ಬಂದಿದೆ.

ಈ ಮೂಲಕ ಜಿಲ್ಲೆಯ ಕರಾವಳಿ ಮತ್ತೊಂದು ತಾಲೂಕಿಗೆ ಕೊರೋನಾ ವಕ್ಕರಿಸಿದಂತಾಗಿದೆ. ಈ ಯುವಕ ಕ್ವಾರಂಟೈನ್ ನಲ್ಲಿ ಇರುವ ಸಂದರ್ಭದಲ್ಲಿ ತನ್ನ ಜೊತೆ ಇದ್ದ ಕೆಲವರ ಸಂಪರ್ಕದಲ್ಲಿದ್ದು, ಈಗ ಇವರೆಲ್ಲ ಕ್ವಾರಂಟೈನ್ ಮುಗಿಸಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಹೀಗಾಗಿ ಅವರ ಆರೋಗ್ಯದ ಬಗ್ಗೆ ಮತ್ತು ಅವರು ಇನ್ಯಾರ ಸಂಪರ್ಕಕ್ಕೆ ಬಂದಿದ್ದಾರೆನ್ನುವುದು ಆತಂಕಕ್ಕೆ ಕಾರಣವಾಗಿದೆ.

ಮಗುವಿನಲ್ಲಿ ಪತ್ತೆ: ಇನ್ನು ಭಟ್ಕಳದಲ್ಲಿ ತಾಯಿಯ ಸಂಪರ್ಕದಲ್ಲಿದ್ದ 2 ವರ್ಷದ ಮಗುವಿನಲ್ಲೂ ಈಗ ಕೊರೋನಾ ದೃಢಪಟ್ಟಿದೆ. ಇದರಿಂದಾಗಿ ಭಟ್ಕಳದಲ್ಲಿ 29 ಸಕ್ರೀಯ ಪ್ರಕರಣಗಳು, ಜಿಲ್ಲೆಯಲ್ಲಿ 30 ಪ್ರಕರಣಗಳು ದಾಖಲಾದಂತಾಗಿದೆ. 11 ಬಿಡುಗಡೆ ಹೊಂದಿದವರೂ ಸೇರಿ ಜಿಲ್ಲೆಯಲ್ಲಿ 41 ಪ್ರಕರಣಗಳು ದಾಖಲಾಗಿವೆ.

ಪ್ರಮುಖವಾಗಿ ಇದುವರೆಗೂ ಭಟ್ಕಳಕ್ಕೆ ಸೀಮಿತವಾಗಿದ್ದ ಈ ಸೋಂಕು ಈಗ ಇನ್ನೊಂದು ತಾಲೂಕಿಗೂ ಹೆಜ್ಜೆ ಇಟ್ಟಿದ್ದು ಕುಮಟಾದಲ್ಲಿ ತಲ್ಲಣ ಶುರುವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss