Tuesday, August 9, 2022

Latest Posts

ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಸಾಧನೆ ಶೂನ್ಯ : ಸಿ.ಎಂ.ಲಿಂಗಪ್ಪ

ರಾಮನಗರ: ಸಮ್ಮಿಶ್ರ ಸರ್ಕಾರ ಜಿಲ್ಲೆಯ ರೈತರಿಗೆ ಅನುಕೂಲಕ್ಕಾಗಿ ( ಪಾದರಹಳ್ಳಿ, ತಿಮ್ಮಸಂದ್ರ) ಹಲವು ಗ್ರಾಮಗಳ ರೈತರ ಜಮೀನಿಗೆ ನೀರು ಹರಿಸುವ ಯೋಜನೆಯನ್ನು ನಿಲ್ಲಿಸಿದ ಕೀರ್ತಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರದ್ದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಲೇವಡಿ ಮಾಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ಒಂದು ವರ್ಷದ ಸಾಧನೆಯನ್ನು ಖಂಡಿಸಿ ಅವರು ಮಾತನಾಡುತ್ತಿದ್ದರು.
ಹಿಂದೆ ೧ ವರ್ಷ ನಾಲ್ಕು ತಿಂಗಳೂ ಅಧಿಕಾರ ನಡೆಸಿದ ಸಮ್ಮಿಶ್ರ ಸರ್ಕಾರವು ಜಿಲ್ಲೆಯ ಅಭಿವೃದ್ಧಿಯನ್ನು ಗಮನವಿಟ್ಟುಕೊಂಡು ಹಲವು ಯೋಜನೆಗಳಿಗೆ ಹಣವನ್ನು ಬಿಡುಗಡೆ ಮಾಡಿತ್ತು. ಸರ್ಕಾರ ಪೂರ್ವಗ್ರಹ ಪಿಡಿತವಾಗಿದ್ದರಿಂದ ಸಮ್ಮಿಶ್ರ ಸರ್ಕಾರ ಯಾವುದೇ ಅಭಿವೃದ್ಧಿಯನ್ನು ಅದು ಮುಮದುವರೆಸಲಿಲ್ಲ.
ಬಿಡದಿ ಭೈರಮಂಗಲ ಕೆರೆಯ ಎರಡು ಕಡೆ ನಾಲೆಗಳ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರ ಹಣ ಬಿಡುಗಡೆ ಮಾಡಿತ್ತು. ಆದರೆ ಆ ಹಣವನ್ನು ಬಿಜೆಪಿ ಸರ್ಕಾರ ಹಿಂಪಡೆದುಕೊAಡಿದೆ. ಯಡಿಯೂರಪ್ಪನವರ ಬಿಜೆಪಿ ಸರ್ಕಾರ ವಿಶ್ವವ್ಯಾಪ್ತಿ ಕೊರೊನಾ ಮಹಾಪಿಡುಗು ವಿರುದ್ಧ ಹೋರಾಟದಲ್ಲೂ ಯಶಸ್ವಿ ಸಾಧಿಸಲು ಸಾದ್ಯವಾಗುಲಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಿಜೆಪಿ ಸರ್ಕಾರದ ವೈಫಲ್ಯವನ್ನು ತೋರಿಸಲು ಬಿಡುಗಡೆ ಮಾಡಿದ್ದ ಅಂಕಿ-ಅAಶವನ್ನು ಅಲ್ಲಗೆಳೆದಿದ್ದಾರೆ. ಆದರೆ ಹಾಸಿಗೆ, ದಿಂಬು, ಸ್ಯಾನಿಟೈಜರ್ ಮತ್ತು ವೆಂಟಿಲೇಟರ್ ಖರೀದಿಯಲ್ಲಿ ೨೦೦೦ ಕೋಟಿಯಷ್ಟು ಹಣವನ್ನು ದುರುಪಯೋಗ ಮಾಡುವ ಮೂಲಕ ಭ್ರಷ್ಟಾಚಾರ ಎಸಗಲಾಗಿದೆ. ಇದು ಸುಳ್ಳಾಗಿದ್ದರೆ ಹೈಕೋರ್ಟ್ ನ್ಯಾಯಾಧೀಶರಿಂದ ಸರ್ಕಾರ ಈ ಬಗ್ಗೆ ತನಿಖೆ ನಡೆಸಿ ಸತ್ಯಾಸತ್ಯತೆ ಹೊರಗೆ ತರಲಿ, ಆದರೆ ಸರ್ಕಾರವು ಕೇವಲ ೩೦೦ ಕೋಟಿಯಷ್ಟು ಮಾತ್ರ ಖರೀದಿ ಮಾಡಲಾಗಿದೆ ಸ್ಪಷ್ಟನೆ ನೀಡಿರುವುದು ಸತ್ಯಕ್ಕೆ ದೂರವಾಗಿದೆ. ಅಲ್ಲದೇ ಕೊರೊನಾ ಸಂದರ್ಭದಲ್ಲಿ ಸರ್ಕಾರದ ನ್ಯಾಯಬೆಲೆ ಪಡಿತರ ಪ್ಯಾಕ್‌ನ ಮೇಲೆ ಬಿಳಿ ಚೀಟಿ ಅಂಟಿಸಿ ಜನರಿಗೆ ನೀಡಿದ್ದು ಜನರು ಮರೆತಿಲ್ಲ. ಜನರ ದಿಕ್ಕುತಪ್ಪಿಸಿ ಅಷ್ಟು ದೊಡ್ಡಿ ಮೊತ್ತದ ಹಣವನ್ನು ಸರ್ಕಾರ ಖರ್ಚು ಮಾಡಲು ಸಾಧ್ಯವೆಂಬುದು ನಂಬಲು ಸಾಧ್ಯವಿಲ್ಲ. ಕೊರೊನಾ ಆರಂಭದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಸುಮ್ಮನೆ ಕೂರದೆ ಎಲ್ಲಾ ವರ್ಗದ ಬಡವರಿಗೆ, ಕೂಲಿ ಕಾರ್ಮಿಕರಿಗೆ ತಮ್ಮ ಕೈಲಾದ ದಿನಸಿ, ತರಕಾರಿಗಳನ್ನು ಉಚಿತವಾಗಿ ನೀಡಿದ್ದನ್ನು ಸರ್ಕಾರ ಮರೆತರೂ ಜಿಲ್ಲೆಯ ಜನಮಾನಸದಿಂದ ತೆಗೆಯಲು ಸಾಧ್ಯವಿಲ್ಲ. ಹೀಗೆ ಹತ್ತು ಹಲವು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರವು ಕೇಂದ್ರದಲ್ಲಿ ಉತ್ತಮ ನಾಯಕತ್ವ ಹೊಂದಿದ ನಮ್ಮ ಪಕ್ಷದ ನಾಯಕ ನರೇಂದ್ರ ಮೋದಿ ಅವರು ಅಧಿಕಾರದಲ್ಲಿ ಇರುವ ಸಂದರ್ಭದಲ್ಲಿಯೇ ಬಿಜೆಪಿ ಸರ್ಕಾರ ಒಂದು ವರ್ಷದ ಸಾಧನೆಯನ್ನು ಕೇವಲ ಕೊರೊನಾ ಮಹಾಮಾರಿಯ ಜೊತೆ ಹೋರಾಟ ಮಾಡಿ ಕಾಲಹರಣ ಮಾಡಿತು ಎನ್ನಬೇಕೆ ? ಜನರೇ ತೀರ್ಮಾನ ಹೇಳಬೇಕು’ ಎಂದರು.
ಬೆಂಗಳೂರಿನಲ್ಲಿ ಹಸುಗೂಸು ಕೋವಿಡ್‌ನಿಂದಾಗಿ ವಿಲವಿಲನೆ ಒದ್ದಾಡಿ ಪ್ರಾಣತ್ಯಾಗ ಮಾಡಿದ್ದು ಗೊತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ಕೋವಿಡ್ ಆರಂಭದ ಸಂದರ್ಭದಲ್ಲಿ ಚಪ್ಪಾಳೆ ಮತ್ತು ದೀಪ ಹಚ್ಚಿ ಎಂದು ಹೇಳಿದ್ದರು. ಆದರೆ ಕೋವಿಡ್ ಯಾವ ದುಃಸ್ಥಿತಿಗೆ ರಾಜ್ಯದ ಜನತೆಯನ್ನು ದೂಡಿದೆ ಎಂದು ಎಲ್ಲರಿಗೂ ಕಾಣುತ್ತಿದೆ. ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಕ್ಕಿಂತ ಅತಿ ಕೋವಿಡ್ ಹೊಂದಿದ ರಾಜ್ಯ ಎಂದು ಕರ್ನಾಟಕ ಅಪಕೀರ್ತಿ ಗಳಿಸಿದೆ.
ಕರೋನಾದಿಂದಾಗಿ ಜಿಲ್ಲೆಯ ಸಿಲ್ಕ್ ಮತ್ತು ಮಿಲ್ಕ್ ತಳ ಹಿಡಿದಿದೆ. ರೈತರು ಮತ್ತು ರೀಲರುಗಳ ಸಂಕಷ್ಟವನ್ನು ಯಾರೂ ಕೇಳುವವರು ಇಲ್ಲದಂತಾಗಿದೆ. ೪೦೦-೫೦೦ಇದ್ದ ರೇಷ್ಮೆಗೂಡಿನ ಬೆಲೆ ೧೦೦-೧೫೦ ರೂ.ಗೆ ಕುಸಿದಿದೆ. ರೇಷ್ಮೆಯನ್ನು ಕೇಳುವವರೇ ಇಲ್ಲದೇ ರೀಲರುಗಳು ಆತ್ಮಹತ್ಯೆ ಮಾಡಿಕೊಳ್ಳುವ ಹಂತ ತಲುಪಿದ್ದಾರೆ. ಇವರ ಕಷ್ಟಕ್ಕೆ ಯಾರೂ ಧಾವಿಸಿಬರಲೇ ಇಲ್ಲ. ಜಿಲ್ಲಾ ಮಂತ್ರಿಗಳಿಗೆ ಇದರ ಬಗ್ಗೆ ಕಿಂಚಿತ್ ಕಾಳಜಿಯೇ ಇಲ್ಲ. ರಾಜ್ಯದಲ್ಲಿಯೇ ಅತಿ ಹೆಚ್ಚು ಹಾಲು ಉತ್ಪಾದಕರು ಇರುವುದು ನಮ್ಮ ಜಿಲ್ಲೆಯಲ್ಲಿ. ಈಗಾಗಲೇ ಲೀಟರ್‌ಗೆ ೫ ರೂ.ಗಳನ್ನು ಇಳಿಸಲಾಗಿದೆ. ಹೋಟೆಲ್, ಅಂಗಡಿ, ಮದುವೆ, ಶುಭಸಮಾರಂಭಗಳಿಗೆ ಹಾಲು, ಮೊಸರಿನ ಬೇಡಿಕೆ ಇತ್ತು. ಆದರೆ ಕೋವಿಡ್‌ನಿಂದಾಗಿ ಹಾಲು ಉಳಿಯುತ್ತಿದೆ. ಬಮೂಲ್‌ರವರು ಹಾಲಿನ ಪೌಡರ್ ಮುಂತಾದ ಉಪ ಉತ್ಪನ್ನಗಳನ್ನು ಮಾಡಿಕೊಂಡು ರೈತರ ಹಾಲನ್ನು ತೆಗೆದುಕೊಳ್ಳುತ್ತಲೇ ಇದೆ. ಆದರೆ ಸರ್ಕಾರ ಯಾವ ಸಹಾಯವನ್ನು ರೈತರಿಗೆ ನೀಡುವಲ್ಲಿ ವಿಫಲವಾಗಿದೆ’.
ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಮಾತನಾಡಿ,’ ಜಿಲ್ಲಾ ಮಂತ್ರಿಗಳು ನೆಂಟರಿಷ್ಟರು ಬಂದ ಹಾಗೆ ಏಕಾಂಗಿಯಾಗಿ ಒಬ್ಬರೇ ಬಂದು ಹೋಗುತ್ತಾರೆ. ಹಿಂದಿನ ಸಮ್ಮಿಶ್ಮ ಸರ್ಕಾರದ ಅಭಿವೃದ್ಧಿ ಬಿಟ್ಟರೆ ಜಿಲ್ಲೆಯ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಎಷ್ಟು ಹಣ ನೀಡಿದೆ ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗ ಚರ್ಚೆ ನಾನು ಸಿದ್ದನಿದ್ದೇನೆ’ ಎಂದು ಸವಾಲು ಹಾಕಿದರು.
‘ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಕೊಡುಗೆ ಶೂನ್ಯ. ಬಿಜೆಪಿ ಸರ್ಕಾರ ಯಾವಾಗ ಅಧಿಕಾರಕ್ಕೆ ಬರುತ್ತದೆಯೋ ಆಗೆಲ್ಲಾ ಜಿಲ್ಲೆಗೆ ಹಿನ್ನೆಡೆಯೇ ಆಗುತ್ತಿದೆ. ನಾಲ್ಕಾರು ಜಿಲ್ಲಾ ಮಂತ್ರಿಗಳು ನೆಪಮಾತ್ರ ಬಂದು ಹೋದರು. ಆದರೆ ಯಾವುದೇ ಅಭಿವೃದ್ಧಿ ಮಾಡಲು ಅವರೆಲ್ಲರೂ ವಿಫಲರಾದರು’. ಎಂದರು.
ಜಿಪA ಮಾಜಿ ಅಧ್ಯಕ್ಷ ಎಚ್.ಎ.ಇಕ್ಬಾಲ್ ಹುಸೇನ್ ಮಾತನಾಡಿ’ ಕೋವಿಡ್ ಆರಂಭದಲ್ಲಿ ರಾಮನಗರ ಜಿಲ್ಲೆ ಹಸಿರುವಲಯವಾಗಿದ್ದು, ಎಲ್ಲರಿಗೂ ಸಂತೋಷ ತಂದಿತ್ತು. ದಿನಕಳೆದಂತೆ ಕೆಂಪು ವಲಯವಾಗಿ ನಂತರ ಕೊರೊನಾ ಹಾಟ್‌ಸ್ಪಾಟ್ ಆಗಿ ಪರಿವರ್ತನೆಯಾಗಿದೆ. ಈ ಸ್ಥಿತಿಯ ನಿರ್ಮಾಣಕ್ಕೆ ಸರ್ಕಾರ ಯಾವ ಕ್ರಮವನ್ನು ಕೈಗೊಳ್ಳದೇ ಇದ್ದುದರಿಂದ ಸೋಂಕಿತರು ಅತಿ ಹೆಚ್ಚು ಕಾಣಿಸಿಕೊಂಡಿದೆ’ ಎಂದು ಆರೋಪಿಸಿದರು.
‘ಕೋವಿಡ್ ಸೋಂಕಿತರು ಆಸ್ಪತ್ರೆಯಲ್ಲಿ ನರಕಸದೃಶ ಜೀವನ ಸಾಗಿಸುತ್ತಿದ್ದಾರೆ. ಕುಡಿಯಲು ನೀರಿಲ್ಲ, ಗೀಸರ್ ವ್ಯವಸ್ಥೆ ಇಲ್ಲ. ಋತುಮತಿಯಾಗಿರುವ ಹೆಣ್ಣು ಮಕ್ಕಳಿಗೆ ಸ್ನಾನ ಮಾಡಲು ಹತ್ತು ದಿನವಾದರೂ ನೀರಿನ ವ್ಯವಸ್ಥೆ ಇಲ್ಲದೆ ಸ್ನಾನ ಮಾಡಿಲ್ಲ. ಜಿಲ್ಲಾ ಮಂತ್ರಿಯಾಗಿರುವವರಿಗೆ ನಾಚಿಕೆಯಾಗಬೇಕು. ಇವರೆಲ್ಲಾ ಉಪಮುಖ್ಯಮಂತ್ರಿ ಸ್ಥಾನದಲ್ಲಿರುವವರು, ಗ್ರಾಮ ಪಂಚಾಯಿತಿ ಸದಸ್ಯರಾಗಲು ಅರ್ಹರಲ್ಲ. ರೋಗಿಗಳಿಗೆ ಔಷಧಿ, ಊಟ, ನೀರಿನ ಕನಿಷ್ಟ ಸೌಲಭ್ಯವನ್ನು ಮಾಡದ ಇವರು ಅಧಿಕಾರದಲ್ಲಿ ಏಕಿರಬೇಕು. ಇಡೀ ವಿಶ್ವದಲ್ಲೇ ಕೋವಿಡ್-೧೯ ನಲ್ಲಿ ಭಾರತ ೩ನೇ ಸ್ಥಾನಕ್ಕೇರಿದೆ. ಮಹಾರಾಷ್ಟç ಮತ್ತು ತಮಿಳುನಾಡು ಬಿಟ್ಟರೆ ಮೂರನೇ ಸ್ಥಾನ ರಾಜ್ಯದ್ದು. ಸೋಂಕಿತರಾದ ವ್ಯಕ್ತಿ ಮೃತ ಪಟ್ಟರೆ ಆತನ ಶವ ಆಯಾ ಧರ್ಮದ ವಿಧಿವಿಧಾನದಂತೆ ಸಂಸ್ಕಾರವಿಲ್ಲ. ಮುಖ ದರ್ಶನವಿಲ್ಲ. ಹೆಣದ ಮೇಲೆ ಹಣದ ಸಂಪಾದನೆಗೆ ಆಸ್ಪತ್ರೆಗಳು ಇಳಿದಿವೆ. ಆಶಾ ಕಾರ್ಯಕರ್ತರ ಸಂಬಳ  ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದರೂ ಏನೂ ಪ್ರಯೋಜನವಾಗಿಲ್ಲ. ಸಿಎಂ ಮನೆ ಮುಂದೆ ಧರಣಿ ಕೂರುವುದೊಂದೆ ಉಳಿದಿರುವ ಮಾರ್ಗ’ ಎಂದರು.
ಸುದ್ಧಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯರಾದ ಮÁಜಿ ಸೈಯದ್ ಜಿಯಾವುಲ್ಲಾ, ಕೆ.ರಮೇಶ್, ಜಿಲ್ಲಾಧ್ಯಕ್ಷ ಗಂಗಾಧರ್, ಪ್ರಧಾನಕಾರ್ಯದರ್ಶಿ ಎನ್.ನರಸಿಂಹಮೂರ್ತಿ, ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ.ಎನ್. ವೆಂಕಟೇಶ್, ಜಿಪಂ ಮಾಜಿ ಸದಸ್ಯ ವಿ.ಎಚ್.ರಾಜು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಿ.ಸಿ.ಪಾರ್ವತಮ್ಮ, ತಾಪಂ ಸದಸ ಜಗದೀಶ್, ತಮ್ಮಣ್ಣ ಇದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss