Friday, July 1, 2022

Latest Posts

ಜಿ.ಪಂ ವಿರೋಧ ಪಕ್ಷದ ನಾಯಕನ ಮೇಲೆ ಹಾಡಹಗಲೆ ದಾಳಿ: ದುಷ್ಕರ್ಮಿಗಳಿಂದ ಕೊಲೆಗೆ ಯತ್ನ

ಯಾದಗಿರಿ: ಹಾಡಹಗಲೆ ಜಿಲ್ಲಾ ಪಂಚಾಯತ್ ವಿರೋಧ ಪಕ್ಷದ ನಾಯಕನ ಮೇಲೆ ಮಾರಾಕಾಸ್ತ್ರಗಳಿಂದ ದುಷ್ಕರ್ಮಿಗಳು ದಾಳಿ ಮಾಡಿದ ಘಟನೆ ಯಾದಗಿರಿ-ಕಲಬುರಗಿ ಹೆದ್ದಾರಿಯಲ್ಲಿ ನಡೆದಿದೆ.
ಸುರಪುರ ತಾಲೂಕಿನ ಖಾನಾಪೂರ ಎಸ್.ಎಚ್ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ವಿರೋಧ ಪಕ್ಷದ ನಾಯಕರಾದ ಮರಲಿಂಗಪ್ಪ ಕರ್ನಾಳ್ ಻ ವರನ್ನುಬುಧವಾರ ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಮಾರಕಾಶ್ತ್ರಗಳಿಂದ ಕೊಚ್ಚಿ ಬಿಸಾಡಿ ಹೋಗಿದ್ದಾರೆ. ಸುರಪುರ ಬಿಜೆಪಿ ಶಾಸಕ ರಾಜಗೌಡ ಆಪ್ತ ಹಾಗೂ ಬಿಜೆಪಿ ಮುಖಂಡರಾಗಿರುವ ಮರಲಿಂಗಪ್ಪ ಕರ್ನಾಳ್ ಇಂದು ಬೆಳಗ್ಗೆ ತನ್ನ ಸ್ಕೂಟರ್ ಮೂಲಕ ಯಾದಗಿರಿ ಪಟ್ಟಣಕ್ಕೆ ಆಗಮಿಸುತ್ತಿರುವ ವೇಳೆ ಈ ಘಟನೆ ನಡೆದಿದೆ. ಸ್ಕೂಟರ್ನಲ್ಲಿ ಬರುತ್ತಿದ್ದ ವೇಳೆ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳ ತಂಡ ಕರ್ನಾಳ್ ಮೇಲೆ ಎರಗಿದ್ದಾರೆ.
ತಲವಾರ್ ಹಾಗೂ ಮಚ್ಚಿನಿಂದ ಮಾರಾಣಾಂತಿಕ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾರೆ. ರಕ್ತದ ಮಡಿಲಿನಲ್ಲಿ ಒದ್ದಾಡುತ್ತಿದ್ದ ಮರಲಿಂಗಪ್ಪನವರನ್ನು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆಗಾಗಿ ಕರೆದಯ್ಯಲಾಯಿತು. ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕರ್ನಾಳ್ ಅವರನ್ನ ಗುಲ್ಬರ್ಗದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಎಸ್ಪಿ ರಿಷಿಕೇಶ್ ಅವರು, ಸುಮಾರು 9 ಗಂಟೆಗೆ ಈ ಘಟನೆ ನಡೆದಿದ್ದು . ಘಟನಾ ಸ್ಥಳವನ್ನ ಪರಿಶೀಲಿಸಿದ್ದೇವೆ. ಮೇಲ್ನೋಟಕ್ಕೆ ದ್ವೇಷದ ಹಿನ್ನೆಲೆ ದಾಳಿ ಮಾಡಿರುವಂತಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಸಂಪೂರ್ಣ ತನಿಖೆಯ ನಂತರ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss