ಜಿ-20 ಶೃಂಗಸಭೆಯಲ್ಲಿ ಮೋದಿ: ಆರ್ಥಿಕ ಲಾಭ ಪಕ್ಕಕ್ಕಿಟ್ಟು ಮಾನವೀಯತೆ ಮೆರೆಯಲು ಕರೆ ಜನರ ಆರೋಗ್ಯವೇ ಪ್ರಧಾನ

0
96

ದುಬೈ: ಕೊರೋನಾ ಸೋಂಕು ವಿರುದ್ಧ ಹೋರಾಡಲು ಜಗತಿಕ ರಾಷ್ಟ್ರಗಳು ಒಗ್ಗೂಡಬೇಕಿದ್ದು, ಜನಸಮಾನ್ಯರ ಆರೋಗ್ಯ ಹಾಗೂ ಕಲ್ಯಾಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ತಿಳಿಸಿದ್ದಾರೆ. ಸೌದಿ ಅರೇಬಿಯಾದಲ್ಲಿ ನಡೆದ 2020ರ ಜಿ20 ಶೃಂಗಸಭೆಯಲ್ಲಿ ಮಾತನಾಡಿ, ಸೋಂಕು ತಡೆಗೆ ಮೂರು ಸೂತ್ರ ಪ್ರಸ್ತಾಪಿಸಿದ್ದಾರೆ.

ರಾಷ್ಟ್ರಗಳು ಆರ್ಥಿಕ ಲಾಭವನ್ನು ಪಕ್ಕಕ್ಕಿಟ್ಟು, ಜನಸಾಮಾನ್ಯರ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ವೈದ್ಯಕೀಯ ಸಂಶೋಧನೆಕುರಿತಾಗಿ ಮುಕ್ತವಾಗಿ ವಿಶ್ವದೊಂದಿಗೆ ಹಂಚಿಕೊಳ್ಳಬೇಕು. ಜತೆಗೆ ಜನರಿಗೆ ಎಟಕುವದರದಲ್ಲಿ ಎಲ್ಲ ರಾಷ್ಟ್ರಗಳು ವೈದ್ಯಕೀಯ ನೆರವು ಕಲ್ಪಿಸಬೇಕುಎಂದು ಮೋದಿ  ಕರೆ ನೀಡಿದ್ದಾರೆ.

ಇಂದು ವಿಶ್ವಾದ್ಯಂತ ಸಾವಿರಾರುಜನರು ಸೋಂಕಿಗೆ ಮೃತಪಟ್ಟಿದ್ದರೂ, ಬಹುದೊಡ್ಡ ರಾಷ್ಟ್ರಗಳು ಸೋಂಕಿಗೆ ಜಂಟಿ ಪ್ರತಿಕ್ರಿಯೆ ನೀಡುವಲ್ಲಿ ವಿಫಲವಾಗಿವೆ.  ಬಹುಪಕ್ಷೀಯ  ಒಕ್ಕೂಟಗಳು ಒಟ್ಟಿಗೆ ಕಾರ್ಯನಿರ್ವಹಿಸುವಲ್ಲಿ, ಸಹಕಾರ ಸಾಧಿಸುವಲ್ಲಿ ವಿಫಲವಾಗಿವೆ ಎಂದು ತಿಳಿಸಿದ್ದಾರೆ.

ಸೋಂಕು ಕೇವಲ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿಲ್ಲ. ಜನರ ಆದಾಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಆರ್ಥಿಕತೆ ಮೇಲೂ ಗಂಭೀರ ಪರಿಣಾಮ ಬೀರಿದೆ.  ಸೋಂಕಿನಿಂದ ಸಾಮಾಜಿಕ ಹಾಗೂ ಆರ್ಥಿಕ ಖರ್ಚು ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಇಂದು ವಿಶ್ವಸಂಸ್ಥೆ ಬಲಪಡಿಸುವ ಅಗತ್ಯವಿದೆ. ಆರ್ಥಿಕತೆಯ ಪರಿಣಾಮಕಾರಿ ನಿರ್ವಹಣೆಗೆ ವಿಶ್ವದ ರಾಷ್ಟ್ರಗಳು ಒಗ್ಗೂಡಬೇಕಿದೆ. ಆರ್ಥಿಕ ಲಾಭ ಪಕ್ಕಕ್ಕಿಟ್ಟು,  ಜನರಿಗಾಗಿ ಸೋಂಕಿಗೆ ಮದ್ದು ಕಂಡುಹಿಡಿಯುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಇದುವರೆಗೂ ಜಿ-20 ಸಭೆಯಲ್ಲಿ ಯಾವುದೇ ಸಂಘಟಿತ ಕಾರ್ಯಯೋಜನೆ ರೂಪಿಸುವುದಾಗಲಿ, ಸಂಘಟಿತವಾಗಿ ಪರಿಹಾರ ಹುಡುಕುವ ಕೆಲಸವಾಗಲಿ ನಡೆದಿರಲಿಲ್ಲ. ಆದರೆ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾ ವಿರುದ್ಧ ಜಂಟಿ ಕಾರ್ಯಯೋಜನೆಗೆ ಕರೆ ನೀಡಿದ್ದ ಬೆನ್ನ, ಮೋದಿ ಪ್ರಸ್ತಾವನೆಗೆ ಸೌದಿ ರಾಜ ಓಗೊಟ್ಟಿದ್ದರು.

ಸಹಕಾರದ ಮಂತ್ರ ಜಪಿಸಿದ ರಾಷ್ಟ್ರಗಳು: ಸೌದಿ ಅರೇಬಿಯಾ ರಾಜ ಸಲ್ಮಾನ್ ಬಿನ್ ಅಬ್ದುಲ್ ಜೀಜ್  ಜಿ-20 ಶೃಂಗಸಭೆಯ ಅಧ್ಯಕ್ಷತೆ ವಹಿಸಿದ್ದು, ಕೊರೋನಾ ವಿರುದ್ಧ ಹೋರಾಡಲು ಜಗತಿಕ ಸಹಕಾರಕ್ಕೆ ಕರೆ ನೀಡಿದರು.
ಸೋಂಕಿಗೆ ಔಷಧಕಂಡುಹಿಡಿಯಲುಹಾಗೂ  ಇತರೆ ವೈದ್ಯಕೀಯ ಸಂಶೋಧನೆ ನಡೆಸಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ, ಜಿ- 20ರ ಉಳಿದ ರಾಷ್ಟ್ರಗಳು ಆರ್ಥಿಕ ನೆರವು ಹಾಗೂ ಮಾರ್ಗದರ್ಶನ ನೀಡಬೇಕು ಎಂದುಕೋರಿದ್ದಾರೆ.
ಇನ್ನುಳಿದಂತೆ ಬ್ರಿಟನ್, ಅಮೆರಿಕ, ಚೀನಾ ನಾಯಕರು ಮಾತನಾಡಿ ಬಿಕ್ಕಟ್ಟಿಗೆ ಸಿಲುಕಿರುವ ರಾಷ್ಟ್ರಗಳ ಹಾಗೂ ಅಂತಾರಾಷ್ಟ್ರೀಯ ಆರ್ಥಿಕತೆಯ ಸುಧಾರಣೆಗೆ ಶ್ರಮಿಸಬೇಕಿದ್ದು, ಒಟ್ಟಾಗಿ ಸವಾಲು ಎದುರಿಸಬೇಕುಎಂದು ಹೇಳಿದ್ದಾರೆ.

ಜಗತಿಕ ಆರ್ಥಿಕತೆಗೆ 5 ಲಕ್ಷ ಕೋಟಿಡಾಲರ್: ಸೋಂಕು ಹರಡುವಿಕೆಯಿಂದ ಬಹುತೇಕಎಲ್ಲ ರಾಷ್ಟ್ರಗಳ ಆರ್ಥಿಕತೆ ಮೇಲೆ ಅಡ್ಡ ಪರಿಣಾಮ ಬೀರಿದ್ದು, ಜಗತಿಕಆರ್ಥಿಕತೆಯೂ ಕುಸಿದಿದೆ. ಹಾಗಾಗಿ ಜಗತಿಕಆರ್ಥಿಕತೆಗೆ ಬಲ ನೀಡಲು ಜಿ-20 ರಾಷ್ಟ್ರಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಬರೋಬ್ಬರಿ 5 ಲಕ್ಷಕೋಟಿ ಹೂಡಲು ನಿರ್ಧರಿಸಿವೆ.

LEAVE A REPLY

Please enter your comment!
Please enter your name here