Wednesday, July 6, 2022

Latest Posts

ಜಿ-7 ಶೃಂಗಸಭೆ ಸಮ್ಮೇಳನಕ್ಕೆ ಭಾರತವನ್ನು ಆಹ್ವಾನಿಸಿದ ಬ್ರಿಟನ್ ಪ್ರಧಾನಿ ಬೋರಿಸ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

೨೦೨೧ ರ ಜೂನ್​ ತಿಂಗಳಲ್ಲಿ ಇಂಗ್ಲೆಂಡ್​ನ ಕಾರ್ನ್​ವೆಲ್​ ಪ್ರಾಂತ್ಯದಲ್ಲಿ ನಡೆಯಲಿರುವ ಜಿ-7 ರಾಷ್ಟ್ರಗಳ ಶೃಂಗಸಭೆ ಸಮ್ಮೇಳನಕ್ಕೆ ಅತಿಥಿಯಾಗಿ ಭಾರತವನ್ನು ಆಹ್ವಾನಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಭಾರತದ ಪ್ರಧಾನಿಯನ್ನು ಜಿ-7 ಶೃಂಗಸಭೆಗೆ ಆಹ್ವಾನಿಸಲಾಗಿದ್ದು, ತಾವೂ ಭಾರತಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.
ಜಗತ್ತಿಗೆ ಪೂರೈಕೆಯಾಗುತ್ತಿರುವ ಕೊರೋನಾ ಲಸಿಕೆಗಳಲ್ಲಿ ಶೇ. 50ರಷ್ಟು ಪಾಲನ್ನು ಭಾರತ ಪೂರೈಸುತ್ತಿದೆ. ಬ್ರಿಟನ್ ಮತ್ತು ಭಾರತ ಕೊರೋನಾ ಸೋಂಕಿನ ವಿರುದ್ಧ ಒಟ್ಟಾಗಿ ಹೋರಾಡುತ್ತಿವೆ ಎಂದು ಹೇಳಿದರು.
ಭಾರತದ ಜೊತೆಗೆ ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ ರಾಷ್ಟ್ರಗಳನ್ನೂ ಕೂಡಾ ಈ ಬಾರಿಯ ಜಿ-7 ರಾಷ್ಟ್ರಗಳ ಶೃಂಗಸಭೆಗೆ ಅತಿಥಿಗಳನ್ನಾಗಿ ಆಹ್ವಾನಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss