Wednesday, August 17, 2022

Latest Posts

ಜೀರಿಗೆ ನೀರು ಮಾಡುವುದು ಹೇಗೆ? ನಿತ್ಯ ಒಂದು ಗ್ಲಾಸ್ ಜೀರಿಗೆ ನೀರು ಕುಡಿದರೆ ಏನೆಲ್ಲ ಪ್ರಯೋಜನವಿದೆ!! ಇದನ್ನು ಓದಿ..

ಜೀರಿಗೆಯಲ್ಲಿ ಅಧಿಕ ಮಟ್ಟದಲ್ಲಿ ಕಬ್ಬಿಣಾಂಶ ಮತ್ತು ನಾರಿನಾಂಶವಿದೆ. ಇದನ್ನು ಹಳೆಕಾಲದಿಂದಲೂ ಬಳಸುತ್ತಲೇ ಇದ್ದಾರೆ. ಇದರ ನಿತ್ಯದ ಸೇವನೆಯಿಂದ ದೇಹದಲ್ಲಿ ಉಷ್ಣತೆ ಪ್ರಮಾಣ ಕಡಿಮೆ ಆಗುತ್ತದೆ. ಹಾಗಾಗಿ ಇದನ್ನು ನಿತ್ಯ ಅಡುಗೆಯಲ್ಲಿ ಬಳಸಬೇಕು.
ಜೀರಿಗೆ ನೀರುವ ಮಾಡುವುದು ಹೇಗೆ?

ಬೇಕಾಗುವ ಪದಾರ್ಥ:
ಜೀರಿಗೆ
ನೀರು

ಮಾಡುವ ವಿಧಾನ:
ಎರಡು ಲೋಟ ಆಗುವಷ್ಟು ನೀರಿಗೆ ಎರಡು ಚಮಚ ಜೀರಿಗೆಯ ಪುಡಿಯನ್ನು ಹಾಕಿ ಕುದಿಸಿ. ನಂತರ ಅದನ್ನು ಸೋಸಿಕೊಂಡು ನಿತ್ಯ ಸೇವಿಸಿ.

ಜೀರಿಗೆ ನೀರಿನ ಉಪಯೋಗ:

  • ಜೀರಿಗೆ ನೀರನ್ನು ದಿನದಲ್ಲಿ ಎರಡು ಬಾರಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ತೂಕ ಇಳಿಸಬಹುದು. ಜೀರಿಗೆಯಲ್ಲಿರುವ ನಾರಿನ ಅಂಶ ನಿಮಗೆ ಹಸಿವು ಆಗದಂತೆ ತಡೆಯುತ್ತದೆ. ತೂಕ ಇಳಿಸಬಹುದು.
  • ದೇಹದ ಉಷ್ಣತೆಯು ಹೆಚ್ಚಿದ್ದಾಗ ಜೀರಿಗೆ ನೀರನ್ನು ದಿನದಲ್ಲಿ ಮೂರು ಹೊತ್ತು ಸೇವಿಸಬೇಕು. ಏಕೆಂದರೆ ಜೀರಿಗೆಯು ನಮ್ಮ ದೇಹವನ್ನು ತಂಪಾಗಿಡುತ್ತದೆ. ದೇಹದ ಉಷ್ಣತೆ ಕಡಿಮೆ ಮಾಡುತ್ತದೆ.
  • ಜಂತು ಹುಳು ನಿವಾರಣೆಗೆ ಜೀರಿಗೆ ನೀರು ಒಳ್ಳೆಯ ರಾಮಬಾಣದಂತೆ. ಜೀರಿಗೆ ನೀರನ್ನು ನಿತ್ಯ ಸೇವಿಸಿದರೆ ಜಂತು ಹುಳುಗಳು ಸಾಯುತ್ತದೆ. ಮತ್ತು ಹೊಟ್ಟೆನೋವು ಬರುವುದಿಲ್ಲ.
  • ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವಿಗೆ ಜೀರಿಗೆ ನೀರು ಒಳ್ಳೆಯ ಪರಿಹಾರ. ಉಗುರು ಬೆಚ್ಚಗಿನ ಜೀರಿಗೆ ನೀರಿಗೆ ಬೆಣ್ಣೆಯನ್ನು ಹಾಕಿಕೊಂಡು ಸೇವಿಸಿದರೆ ಹೊಟ್ಟೆನೋವು ಕಡಿಮೆ ಆಗುತ್ತದೆ.
  • ಮೈಗ್ರೇನ್ ಸಮಸ್ಯೆ ಇರುವವರು ಜೀರಿಗೆ ನೀರಿನಲ್ಲಿ ಅಕ್ಕಿಯನ್ನು ನೆನೆಸಿಟ್ಟು ಅದನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ನೆತ್ತಿಯ ಮೇಲೆ ಮತ್ತು ಹಣೆಯ ಮೇಲೆ ಇದನ್ನು ಹಚ್ಚಿಕೊಂಡರೆ ಮೈಗ್ರೇನ್ ಸಮಸ್ಯೆ ಹೋಗುತ್ತದೆ.
  • ಜೀರ್ಣಶಕ್ತಿಯನ್ನು ಹೆಚ್ಚಿಸುವಲ್ಲಿ ಜೀರಿಗೆ ನೀರು ಮಹತ್ವದ ಸ್ಥಾನವನ್ನು ಹೊಂದಿದೆ. ಅತೀ ಹೆಚ್ಚಿನ ಮಟ್ಟದಲ್ಲಿ ಕಬ್ಬಿಣಾಂಶ ಮತ್ತು ನಾರಿನಂಶವನ್ನು ಹೊಂದಿರುವ ಜೀರಿಗೆ ನಿಮ್ಮ ಇಮ್ಮ್ಯುನಿಟ್ ಸಿಸ್ಟೆಮ್ ಸರಿಯಾದ ಮಟ್ಟದಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಅಜೀರ್ಣದಿಂದಾಗುವ ಹೊಟ್ಟೆ ನೋವನ್ನು ಸಹ ಇದು ಕಡಿಮೆ ಮಾಡುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!