ಕಾಸರಗೋಡು: ಕೇರಳ ರಾಜ್ಯ ಪ್ಲಸ್ ಟು ಪರೀಕ್ಷಾ ಫಲಿತಾಂಶವು ಜುಲೈ 15 ಬುಧವಾರದಂದು ಪ್ರಕಟಗೊಳ್ಳಲಿದೆ. ಈ ಮೊದಲು ಜುಲೈ 10 ರಂದು ಪ್ರಕಟಿಸುವುದಾಗಿ ಘೋಷಿಸಲಾಗಿದ್ದ ಫಲಿತಾಂಶವನ್ನು ರಾಜಧಾನಿ ತಿರುವನಂತಪುರದಲ್ಲಿ ಕೊರೋನಾ ಹಿನ್ನೆಲೆಯ ಟ್ರಿಪಲ್ ಲಾಕ್ ಡೌನ್ ಜಾರಿಗೆ ತಂದಿರುವುದರಿಂದ ಮುಂದೂಡಲಾಗಿತ್ತು. ಪರೀಕ್ಷಾ ಮೌಲ್ಯಮಾಪನವನ್ನು ಜುಲೈ 10ರ ಮೊದಲೇ ಪೂರ್ಣಗೊಳಿಸಲಾಗಿದೆ.
ಪರೀಕ್ಷೆಯ ಫಲಿತಾಂಶಗಳನ್ನು keralaresults.nic.in, results.itschool.gov.in, dhsekerala.gov.in ಮತ್ತು prd.kerala.gov ನಲ್ಲಿ ,
ಡಿಎಚ್ಎಸ್ಇ (ಹೈಯರ್ ಸೆಕೆಂಡರಿ ಶಿಕ್ಷಣ ನಿರ್ದೇಶನಾಲಯ) ದ ಅಧಿಕೃತ ವೆಬ್ಸೈಟ್ಗಳಲ್ಲಿ ಪ್ರಕಟಿಸಲಾಗುವುದು. ಈ ಬಾರಿ ಎರಡು ಹಂತಗಳಲ್ಲಿ ಪ್ಲಸ್ ಟು ಪರೀಕ್ಷೆಗಳು ನಡೆದಿದ್ದವು.
ಕೋವಿಡ್ ವಿಸ್ತರಣೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮದ ಭಾಗವಾಗಿ ಕೆಲವು ವಿಷಯಗಳಲ್ಲಿನ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ನಂತರ ಮೇ 26 ಮತ್ತು 29 ರ ನಡುವೆ ಪರೀಕ್ಷೆಗಳನ್ನು ನಡೆಸಲಾಯಿತು. ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ
‘ಸೇ’ ಪರೀಕ್ಷೆಯ ಮೂಲಕ ಮತ್ತೆ ಅವಕಾಶವನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ. ಹನ್ನೆರಡನೇ ತರಗತಿಯ ಫಲಿತಾಂಶದ ನಂತರ ಪ್ಲಸ್ ವನ್ ವಿಭಾಗದ ಫಲಿತಾಂಶವನ್ನು ಸಹ ಪ್ರಕಟಿಸಲಾಗುತ್ತದೆ.
ಕಳೆದ ಶೈಕ್ಷಣಿಕ ವರ್ಷದ ಪ್ಲಸ್ ಟು ಫಲಿತಾಂಶವನ್ನು ಮೇ 8 ರಂದು ಪ್ರಕಟಿಸಲಾಗಿತ್ತು. ಆ ಸಮಯದಲ್ಲಿ ಉತ್ತೀರ್ಣ ಶೇಕಡಾ 84.33 ಆಗಿತ್ತು.