Latest Posts

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸೀಲ್ ಡೌನ್: 42 ಮಂದಿ ಪತ್ರಕರ್ತರಿಗೆ ಕ್ವಾರಂಟೈನ್

ಮೈಸೂರು: ವಿಪಕ್ಷ ನಾಯಕರಾದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಮಹಾಮಾರಿ ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಭವನವನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಜುಲೈ 30ರಂದು...

ಸುಶಾಂತ್ ಕೇಸ್ ತನಿಖೆಯಲ್ಲಿ ಮುಂಬೈ ಪೊಲೀಸರ ಹಿಂದೇಟು..! ಬಿಹಾರ ಡಿಜಿಪಿ ಗುಪ್ತೇಶ್ವರ ಪಾಂಡೆ ಆರೋಪ?

ನಟ  ಸುಶಾಂತ್ ಸಿಂಗ್  ರಜಪೂತ್  ಸಾವಿನ  ಪ್ರಕರಣ  ದಿನದಿಂದ  ದಿನಕ್ಕೆ   ತೀವ್ರ  ಸ್ವರೂಪ  ಪಡೆದುಕೊಳ್ಳುತ್ತಿದೆ. . ಈ ಹೈ ಪ್ರೊಫೈಲ್ ಕೇಸ್ನಲ್ಲಿ ಅನೇಕರ ಹೆಸರು ಕೇಳಿಬಂದಿದೆ. ಹಾಗಾಗಿ ಮುಂಬೈ ಪೊಲೀಸರು ಸರಿಯಾಗಿ ತನಿಖೆ ನಡೆಸಿದ್ದಾರೋ...

ಶಾಲ್ಮಲೆಯ ಕೆಂಬಣ್ಣದ ಒಡಲಲ್ಲಿ ಕರಿಗಪ್ಪು ಲಿಂಗಗಳು: ವರ್ಣನೆಗೆ ನಿಲುಕ ಸೊಬಗಿನ ಸಹಸ್ರಲಿಂಗ

ಹಸಿರು ಹೊದಿಕೆಯ ಪಕ್ಕಕ್ಕೆ ಮಗ್ಗಿಲಾಗಿ ಶಾಂತ ಚಿತ್ತದಲಿ ಹೆಜ್ಜೆ ಹೆಜ್ಜೆಗೂ ಸಿಗುವ ಶಿವನಿಗೆ ಜಲಾಭಿಷೇಕ ಮಾಡಿ ತನ್ನ ಕಾಯಕ ಮುಗಿಯಿತೆಂದು ಗಮ್ಯ ಸ್ಥಳಕ್ಕೆ ಹೆಜ್ಜೆ ಹಾಕುವ ಶಾಲ್ಮಲಾ ನದಿ. ಮೇಘರಾಜ ನೀರಾಗಿ ಧರೆಗಿಳಿದಾಗ...

ಜುಲೈ 18ರ ಒಳಗೆ ಪಿಯುಸಿ, ಆಗಸ್ಟ್ ಮೊದಲ ವಾರ ಎಸ್ಸೆಸೆಲ್ಸಿ ಫಲಿತಾಂಶ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರುಶನದ ಬಳಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಭಿಮತ

sharing is caring...!

ಸುಬ್ರಹ್ಮಣ್ಯ: ಎರಡನೇ ಪಿಯುಸಿಯ ಮೌಲ್ಯಮಾಪನವು ಈಗಾಗಲೇ ಸಾಂಗವಾಗಿ ನೆರವೇರಿದೆ.ಉಪನ್ಯಾಸಕರು ಈ ಕರ್ತವ್ಯವನ್ನು ಶೀಘ್ರ ನೆರವೇರಿಸಿದ್ದಾರೆ.ಜುಲೈ 18 ರ ಒಳಗೆ ಪಿಯುಸಿ ಫಲಿತಾಂಶ ಬರಲಿದೆ.ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನವು ಸೋಮವಾರದಿಂದ ಆರಂಭವಾಗಲಿದೆ. ಮೌಲ್ಯಮಾಪನಾ ಕೇಂದ್ರವನ್ನು ಮೌಲ್ಯಮಾಪನಾ ಸುರಕ್ಷಾ ಕೇಂದ್ರವನ್ನಾಗಿ ಪರಿವರ್ತಿಸಿ ಹೆಚ್ಚಿನ ಮುಂಜಾಗ್ರತಾ ಕ್ರಮವನ್ನು ಅನುಸರಿಸಿಕೊಂಡು ಮೌಲ್ಯಮಾಪನಾ ಕಾರ್ಯ ನೆರವೇರಿಸಲಾಗುವುದು. ಜುಲೈ ೩೦ರ ಒಳಗೆ ಮೌಲ್ಯಮಾಪನ ಪೂರ್ತಿಗೊಳ್ಳಲಿದೆ.ಆಗಸ್ಟ್ ಮೊದಲನೇ ವಾರದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ನಾಗಾರಾಧನೆಯ ಪುಣ್ಯತಾಣ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಶನಿವಾರ ಭೇಟಿ ನೀಡಿ ಶ್ರೀ ದೇವರ ದರುಶನದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಸುಮಾರು 98% ವಿದ್ಯಾರ್ಥಿಗಳು ಅಂದರೆ ಸುಮಾರು 8 ಲಕ್ಷ ಮಕ್ಕಳು ಧೈರ್ಯವಾಗಿ ಪರೀಕ್ಷೆ ಬರೆದಿದ್ದಾರೆ. ಉತ್ತಮವಾಗಿ ಮೌಲ್ಯಮಾಪನ ಕಾರ್ಯ ಸಂಪನ್ನಗೊಳಿಸುವ ಮೂಲಕ ಮಕ್ಕಳ ಧೈರ್ಯಕ್ಕೆ ನ್ಯಾಯ ಒದಗಿಸಲಾಗುವುದು ಎಂದರು.
ಶಾಲೆಗಳ ಪುನರಾರಂಭ ಸದ್ಯಕ್ಕಿಲ್ಲ 
ರಾಜ್ಯದಲ್ಲಿ ಶಾಲೆಗಳ ಪುನರಾರಂಭ ಕುರಿತು ಸರಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಶಾಲೆಗಳ ಆರಂಭದ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ.ತಜ್ಞರ ಸಮಿತಿಯ ಸಲಹೆಗಳನ್ನು ಕೇಳಿಕೊಂಡು ಪರಿಸ್ಥಿತಿಯನ್ನು ನೋಡಿಕೊಂಡು ತರಗತಿ ಆರಂಭದ ಬಗ್ಗೆ ಚಿಂತನೆ ಮಾಡಲಾಗುವುದು.ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳ ಆರಂಭ ಇಲ್ಲ.ಕರೋನಾದ ಆರ್ಭಟ ಕಡಿಮೆಯಾದಾಗ ಶಾಲೆ ಆರಂಭದ ಬಗ್ಗೆ ನಿರ್ಧಾರ ತಳೆಯಲಾಗುವುದು.ಮಕ್ಕಳ ಹಿತದೃಷ್ಠಿ ಮತ್ತು ಪೋಷಕರ ಸಲಹೆಗಳನ್ನು ತೆಗೆದುಕೊಂಡು ಶಾಲೆ ಆರಂಭದ ದಿನಾಂಕವನ್ನು ಘೋಷಿಸುತ್ತೇವೆ.ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಶಾಲೆ ಆರಂಭ ಅಸಾಧ್ಯವಾಗಿದೆ ಎಂದು ಶಿಕ್ಷಣ ಸಚಿವರು ನುಡಿದರು.
ನ್‌ಲೈನ್ ಶಿಕ್ಷಣ ಇಲ್ಲ 
ರಾಜ್ಯ ಸರಕಾರ ಆನ್‌ಲೈನ್ ಶಿಕ್ಷಣವನ್ನು ಕೊಡುವ ತೀರ್ಮಾನ ಮಾಡಿಲ್ಲ್ಲ. ನಮ್ಮ ರಾಜ್ಯದಲ್ಲಿ ಗ್ರಾಮೀಣ ಪ್ರದೇಶಗಳು ಅಧಿಕವಾಗಿರುವುದರಿಂದ ಆನ್‌ಲೈನ್ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಇಲ್ಲ.ಹಳ್ಳಿಗಳಲ್ಲಿ ಆನ್‌ಲೈನ್ ಶಿಕ್ಷಣ ಕಷ್ಟಸಾಧ್ಯವಾದುದರಿಂದ ಆನ್‌ಲೈನ್ ತರಗತಿ ನಡೆಸಲು ಸರಕಾರ ನಿರ್ಧಾರ ಮಾಡುವುದಿಲ್ಲ. ಇದು ಕೆಲವು ಖಾಸಾಗಿ ಶಾಲೆಗಳು ಮಾಡಿದ ಕಾರ್ಯಕ್ರಮಗಳಾಗಿತ್ತು.ಖಾಸಾಗಿ ಶಿಕ್ಷಣ ಸಂಸ್ಥೆಗಳು ಪೋಷಕರಿಗೆ ಲ್ಯಾಪ್‌ಟಾಪ್ ಇತ್ಯಾದಿಗಳನ್ನು ಖರೀದಿಸುವಂತೆ ಒತ್ತಡ ಹೇರುವ ಬಗ್ಗೆ ದೂರುಗಳು ಬಂದಿದೆ. ಮಂಗಳವಾರ ಎಲ್ಲಾ ದೂರುಗಳನ್ನು ಪರಮಾರ್ಶೆ ಮಾಡಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಖಾಸಾಗಿ ಶಾಲೆಗಳು ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡುವ ವಿಷಯ ತಿಳಿಯಿತು.ಇದು ಶಿಕ್ಷಣ ಅಲ್ಲ ಶಿಕ್ಷೆಯಾಗಿದೆ ಎಂದು ಸುರೇಶ್ ಕುಮಾರ್ ನುಡಿದರು.
ಚಂದನದಲ್ಲಿ ಸ್ನೇಹ ಬಂಧ ತರಗತಿ 
ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ ಉಪಯೋಗಕ್ಕೆ ಮಹತ್ವ ನೀಡುವ ಬಗ್ಗೆ ಸರಕಾರವು ಹೆಚ್ಚು ಚಿಂತನೆ ಮಾಡಿದೆ.ಈ ನಿಟ್ಟಿನಲ್ಲಿ ಶೀಘ್ರವೇ ದೂರದರ್ಶನದ ಚಂದನ ವಾಹಿನಿಯಲ್ಲಿ ಸ್ನೇಹ ಬಂಧ ತರಗತಿ ಆರಂಭಿಸಲಾಗುವುದು. ಇದರಲ್ಲಿ ೮,೯ ಮತ್ತು ೧೦ನೇ ತರಗತಿಗೆ ಪಠ್ಯಗಳ ಬಗ್ಗೆ ತಿಳುವಳಿಗೆ ನೀಡಲಾಗುವುದು.ಬೇರೆ ತರಗತಿಗೆ ಕೂಡಾ ಇದನ್ನು ಮುಂದೆ ವಿಸ್ತರಿಸಲಾಗುವುದು.ಇದಕ್ಕಾಗಿ ಎರಡು ಹೆಚ್ಚುವರಿ ಚಾನಲ್‌ಗಳನ್ನು ದೂರದರ್ಶನದ ಬಳಿ ಕೇಳಲಾಗಿದೆ. ದೂರದರ್ಶನದ ಮೂಲಕ ಪೂರ್ತಿ ತರಗತಿಗಳನ್ನು ಮಾಡಲಾಗುವುದು ಎಂದು ಹೇಳಿದರು.
ಭವಿಷ್ಯ ಉಜ್ವಲವಾಗಲು ಪ್ರಾರ್ಥನೆ 
ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥಿಸಿದ್ದೇನೆ.ಮಕ್ಕಳ ಧೈರ್ಯದಿಂದ ಪೋಷಕರಿಗೆ ಎಲ್ಲಕ್ಕಿಂತ ಮಿಗಿಲಾಗಿ ಭಗವಂತನ ಆಶೀರ್ವಾದ, ಮಕ್ಕಳ ಧೈರ್ಯ ಮತ್ತು ಪೋಷಕರಿಗೆ ಸರಕಾರದ ಮೇಲೆ ಇದ್ದ ವಿಶ್ವಾಸದಿಂದ ಸುಲಲಿತವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂಪನ್ನವಾಗಿದೆ.ಎಲ್ಲಾ ಮಕ್ಕಳ ಪರವಾಗಿ ಶ್ರೀ ದೇವರ ದರುಶನ ಮಾಡಿದ್ದೇನೆ.ಅಲ್ಲದೆ ಅವರ ಭವಿಷ್ಯಕ್ಕೆ ಭಗವಂತನ ಆಶೀರ್ವಾದ ಇರಲಿ ಎಂದು ಪ್ರಾರ್ಥಿಸಿದ್ದೇನೆ.ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ.ಸರ್ವರ ಸಮನ್ವಯತೆಯಿಂದ ಈ ಪರೀಕ್ಷೆ ಸುಸಂಪನ್ನವಾಗಿದೆ.
ಈ ಸಂದರ್ಭದಲ್ಲಿ ಸುರೇಶ್ ಕುಮಾರ್ ಅವರು ಪತ್ನಿ ಸಾವಿತ್ರಿ ಸುರೇಶ್, ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್, ಶ್ರೀಕುಮಾರ್ ಬಿಲದ್ವಾರ ಉಪಸ್ಥಿತರಿದ್ದರು.
ಶ್ರೀ ದೇವರ ದರುಶನ 
ಶನಿವಾರ ಮುಂಜಾನೆ ಸಚಿವ ಸುರೇಶ್ ಕುಮಾರ್ ಅವರು ಪತ್ನಿ ಸಾವಿತ್ರಿ ಸುರೇಶ್ ಅವರೊಂದಿಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿದರು. ಬಳಿಕ ಶ್ರೀ ದೇವರ ದರುಶನ ಮಾಡಿದ ಅವರು ಮಹಾಪೂಜೆ ವೀಕ್ಷಿಸಿದರು.ಈ ಮೊದಲು ಆದಿಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಸ್ಥಳಿಯರಾದ ಶ್ರೀಕುಮಾರ್ ಬಿಲದ್ವಾರ ಉಪಸ್ಥಿತರಿದ್ದರು. ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್ ಸಚಿವರನ್ನು ಸ್ವಾಗತಿಸಿದರು.

Latest Posts

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸೀಲ್ ಡೌನ್: 42 ಮಂದಿ ಪತ್ರಕರ್ತರಿಗೆ ಕ್ವಾರಂಟೈನ್

ಮೈಸೂರು: ವಿಪಕ್ಷ ನಾಯಕರಾದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಮಹಾಮಾರಿ ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಭವನವನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಜುಲೈ 30ರಂದು...

ಸುಶಾಂತ್ ಕೇಸ್ ತನಿಖೆಯಲ್ಲಿ ಮುಂಬೈ ಪೊಲೀಸರ ಹಿಂದೇಟು..! ಬಿಹಾರ ಡಿಜಿಪಿ ಗುಪ್ತೇಶ್ವರ ಪಾಂಡೆ ಆರೋಪ?

ನಟ  ಸುಶಾಂತ್ ಸಿಂಗ್  ರಜಪೂತ್  ಸಾವಿನ  ಪ್ರಕರಣ  ದಿನದಿಂದ  ದಿನಕ್ಕೆ   ತೀವ್ರ  ಸ್ವರೂಪ  ಪಡೆದುಕೊಳ್ಳುತ್ತಿದೆ. . ಈ ಹೈ ಪ್ರೊಫೈಲ್ ಕೇಸ್ನಲ್ಲಿ ಅನೇಕರ ಹೆಸರು ಕೇಳಿಬಂದಿದೆ. ಹಾಗಾಗಿ ಮುಂಬೈ ಪೊಲೀಸರು ಸರಿಯಾಗಿ ತನಿಖೆ ನಡೆಸಿದ್ದಾರೋ...

ಶಾಲ್ಮಲೆಯ ಕೆಂಬಣ್ಣದ ಒಡಲಲ್ಲಿ ಕರಿಗಪ್ಪು ಲಿಂಗಗಳು: ವರ್ಣನೆಗೆ ನಿಲುಕ ಸೊಬಗಿನ ಸಹಸ್ರಲಿಂಗ

ಹಸಿರು ಹೊದಿಕೆಯ ಪಕ್ಕಕ್ಕೆ ಮಗ್ಗಿಲಾಗಿ ಶಾಂತ ಚಿತ್ತದಲಿ ಹೆಜ್ಜೆ ಹೆಜ್ಜೆಗೂ ಸಿಗುವ ಶಿವನಿಗೆ ಜಲಾಭಿಷೇಕ ಮಾಡಿ ತನ್ನ ಕಾಯಕ ಮುಗಿಯಿತೆಂದು ಗಮ್ಯ ಸ್ಥಳಕ್ಕೆ ಹೆಜ್ಜೆ ಹಾಕುವ ಶಾಲ್ಮಲಾ ನದಿ. ಮೇಘರಾಜ ನೀರಾಗಿ ಧರೆಗಿಳಿದಾಗ...

ರಾಮ ಜನ್ಮ ಭೂಮಿಯಲ್ಲಿ ಶ್ರೀರಾಮಾರ್ಚನೆ ಪೂಜೆ ಪ್ರಾರಂಭ| ರಾಮಲಲ್ಲಾ ಮಂದಿರ ಶಿಲಾನ್ಯಾಸಕ್ಕೆ ಇನ್ನು ಒಂದೇ ದಿನ ಬಾಕಿ

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸಕ್ಕೆ ಶ್ರೀರಾಮಾರ್ಚನೆ ಪೂಜೆ ಪ್ರಾರಂಭವಾಗಿದೆ. ಈ ಪೂಜೆಯಲ್ಲಿ ರಾಮನನ್ನು ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಲಾಗುವುದು. ನಾಲ್ಕು ಹಂತಗಳಲ್ಲಿ ರಾಮನನ್ನು ಪೂಜಿಸಲಾಗುವುದು ಎಂದು ಅರ್ಚಕರು ತಿಳಿಸಿದ್ದಾರೆ. ಮೂರನೇ ಹಂತದಲ್ಲಿ ರಾಮಲಲ್ಲಾನ ತಂದೆ ದಶರಥ...

Don't Miss

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸೀಲ್ ಡೌನ್: 42 ಮಂದಿ ಪತ್ರಕರ್ತರಿಗೆ ಕ್ವಾರಂಟೈನ್

ಮೈಸೂರು: ವಿಪಕ್ಷ ನಾಯಕರಾದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಮಹಾಮಾರಿ ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಭವನವನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಜುಲೈ 30ರಂದು...

ಸುಶಾಂತ್ ಕೇಸ್ ತನಿಖೆಯಲ್ಲಿ ಮುಂಬೈ ಪೊಲೀಸರ ಹಿಂದೇಟು..! ಬಿಹಾರ ಡಿಜಿಪಿ ಗುಪ್ತೇಶ್ವರ ಪಾಂಡೆ ಆರೋಪ?

ನಟ  ಸುಶಾಂತ್ ಸಿಂಗ್  ರಜಪೂತ್  ಸಾವಿನ  ಪ್ರಕರಣ  ದಿನದಿಂದ  ದಿನಕ್ಕೆ   ತೀವ್ರ  ಸ್ವರೂಪ  ಪಡೆದುಕೊಳ್ಳುತ್ತಿದೆ. . ಈ ಹೈ ಪ್ರೊಫೈಲ್ ಕೇಸ್ನಲ್ಲಿ ಅನೇಕರ ಹೆಸರು ಕೇಳಿಬಂದಿದೆ. ಹಾಗಾಗಿ ಮುಂಬೈ ಪೊಲೀಸರು ಸರಿಯಾಗಿ ತನಿಖೆ ನಡೆಸಿದ್ದಾರೋ...

ಶಾಲ್ಮಲೆಯ ಕೆಂಬಣ್ಣದ ಒಡಲಲ್ಲಿ ಕರಿಗಪ್ಪು ಲಿಂಗಗಳು: ವರ್ಣನೆಗೆ ನಿಲುಕ ಸೊಬಗಿನ ಸಹಸ್ರಲಿಂಗ

ಹಸಿರು ಹೊದಿಕೆಯ ಪಕ್ಕಕ್ಕೆ ಮಗ್ಗಿಲಾಗಿ ಶಾಂತ ಚಿತ್ತದಲಿ ಹೆಜ್ಜೆ ಹೆಜ್ಜೆಗೂ ಸಿಗುವ ಶಿವನಿಗೆ ಜಲಾಭಿಷೇಕ ಮಾಡಿ ತನ್ನ ಕಾಯಕ ಮುಗಿಯಿತೆಂದು ಗಮ್ಯ ಸ್ಥಳಕ್ಕೆ ಹೆಜ್ಜೆ ಹಾಕುವ ಶಾಲ್ಮಲಾ ನದಿ. ಮೇಘರಾಜ ನೀರಾಗಿ ಧರೆಗಿಳಿದಾಗ...
error: Content is protected !!