Friday, January 22, 2021

Latest Posts

ಜೂಜಾಟ| ನಗದು ಸಹಿತ ಇಬ್ಬರ ಬಂಧನ: ನಾಲ್ಕು ವಾಹನಗಳು ವಶಕ್ಕೆ

ಹೊಸದಿಗಂತ ವರದಿ, ಕುಶಾಲನಗರ

ಇಲ್ಲಿಗೆ ಸಮೀಪದ ಕೂಡ್ಲೂರು ಕೈಗಾರಿಕಾ ಪ್ರದೇಶದ ಸಾರ್ವಜನಿಕ ಸ್ಧಳದಲ್ಲಿ ಜೂಜಾಟವಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು ಮೂರು ಬೈಕ್ ಹಾಗೂ ಒಂದು ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.

ತಮಗೆ ದೊರೆತ ಖಚಿತವಾದ ಮಾಹಿತಿ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಶಿವಶಂಕರ್ ಮತ್ತು ತಂಡ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ ಹತ್ತು ಮಂದಿಯ ಪೈಕಿ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇತರ 8 ಮಂದಿ ಪರಾರಿಯಾಗಿದ್ದು, ಆರೋಪಿಗಳು ಆಟಕ್ಕೆ ಬಳಸಿದ್ದ 1470 ರೂ.ನಗದು ಹಾಗೂ ಸ್ಥಳದಲ್ಲಿದ್ದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಶಿವಶಂಕರ್, ಸಹಾಯಕ ಠಾಣಾಧಿಕಾರಿ ರವಿ, ಸಿಬ್ಬಂದಿ ರವಿ ಪಾಲ್ಗೊಂಡಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!