ಹೊಸ ದಿಗಂತ ವರದಿ, ಬಳ್ಳಾರಿ:
ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಅಡ್ಡೆ ಮೇಲೆ ಪೊಲೀಸ್ ರು ಗುರುವಾರ ದಾಳಿ ನಡೆಸಿದ್ದು, 46 ಜನರನ್ನು ವಶಕ್ಕೆ ಪಡೆದು 12ಲಕ್ಷಕ್ಕೂ ಹೆಚ್ಚು ಹಣವನ್ನು ವಶಕ್ಕೆ ಪಡೆದ ಘಟನೆ ನಗರದ ಕಾಳಮ್ಮ ಬೀದಿಯ ರಾಮೇಶ್ವರಿ ಲಾಡ್ಜ್ ನಲ್ಲಿ ನಡೆದಿದೆ.
ನಗರದ ರಾಮೇಶ್ವರಿ ಹೋಟೆಲ್ನಲ್ಲಿ ಅಂದರ್ ಬಾಹರ್, ಇಸ್ಪೀಟ್, ಜೂಜಾಟ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು, ಜಿಲ್ಲಾ ಪೊಲೀಸ್ ಅಧೀಕ್ಷಕರು ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಲಾಡ್ಜ್ ಮೇಲೆ ಏಕಾ ಏಕು ದಾಳಿ ನಡೆಸಿದ್ದಾರೆ.
ಈ ವೇಳೆ ಜೂಜಾಟದಲ್ಲಿ ತೊಡಗಿದ್ದ 46 ಜನರನ್ನು ಬಂಧಿಸಿ, ಸುಮಾರು 12 ಲಕ್ಷಕ್ಕೂ ಹೆಚ್ಚು ನಗದು, ಒಂದು ಕಾರು, 9 ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ನಗರದ ಬ್ರೂಸಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.