Sunday, July 3, 2022

Latest Posts

ಜೂನಿಯರ್ ಚಿರು ಸರ್ಜಾ ವಿಡಿಯೋ ಹಂಚಿಕೊಂಡ ಮೇಘನಾ ರಾಜ್, ಮಗುವನ್ನು ಪರಿಚಯಿಸುವ ದಿನಾಂಕ ಫಿಕ್ಸ್!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಸ್ಯಾಂಡಲ್‌ವುಡ್ ಬೆಸ್ಟ್ ಕಪಲ್ ಎನಿಸಿಕೊಂಡಿದ್ದ ಚಿರು ಸರ್ಜಾ ಹಾಗೂ ಮೇಘನಾ ರಾಜ್ ಅವರ ಮಗುವನ್ನು ನೀವು ನೋಡಿದ್ದೀರಾ?
ಮಗು ಹುಟ್ಟಿದ ದಿನ ಕೆಲವು ಫೋಟೊಗಳು ವೈರಲ್ ಆಗಿದ್ದವು. ಆದರೆ ಚಿರು ಮೇಘನಾ ಮಗು ಹೇಗಿದೆ ಎಂದು ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಅಂತೆಯೇ ಮೇಘನಾ ರಾಜ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿದ್ದು,ಫೆ.14ಕ್ಕೆ ಮಗುವಿನ ಮುಖವನ್ನು ನೀವೆಲ್ಲರೂ ನೋಡಲಿದ್ದೀರಿ ಎಂದಿದ್ದಾರೆ.
ವಿಡಿಯೋ ಜೊತೆಗೆ ಮಗುವಿನ ಆಡಿಯೋ ಸೇರಿಸಿದ್ದಾರೆ. ನೀವು ಕೇಳುತ್ತಿರುವುದು ಅವನ ಧ್ವನಿ. ಇನ್ನೇನು ಎರಡೇ ದಿನದಲ್ಲಿ ಮಗುವಿನ ಮುಖ ನಿಮ್ಮೆಲ್ಲರಿಗೂ ತೋರಿಸಲಿದ್ದೇನೆ ಎಂದಿದ್ದಾರೆ.
ಪೋಸ್ಟ್ ಮಾಡಿ ಕೆಲವೇ ಗಂಟೆಗಳಾಗಿದ್ದು ಲಕ್ಷಕ್ಕಿಂತ ಹೆಚ್ಚು ಲೈಕ್ಸ್ ಬಂದಿದೆ. ಸಿನಿಗಣ್ಯರೂ ಕೂಡ ನಾವು ಮಗುವನ್ನು ನೋಡಲು ಉತ್ಸುಕರಾಗಿದ್ದೇವೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss