Saturday, August 13, 2022

Latest Posts

ಜೂನ್ ಅಂತ್ಯದವರೆಗೆ ಕಾಯ್ದಿರಿಸಿದ ಎಲ್ಲಾ ಪ್ರಯಾಣಿಕ ರೈಲು ಟಿಕೆಟ್ ರದ್ದು: ರೈಲ್ವೆ ಇಲಾಖೆ ಘೋಷಣೆ

ನವದೆಹಲಿ: ಭಾರತೀಯ ರೈಲ್ವೆ ಜೂನ್ 30 ರಂದು ಅಥವಾ ಅದಕ್ಕೂ ಮೊದಲು ಪ್ರಯಾಣಿಸಲು ಕಾಯ್ದಿರಿಸಿದ ಎಲ್ಲಾ ಟಿಕೆಟ್‌ಗಳನ್ನು ರದ್ದುಪಡಿಸಿದೆ.
ಎಲ್ಲಾ ಪ್ರಯಾಣಿಕರ ರೈಲುಗಳು ಸ್ಥಗಿತಗೊಲಿಸಲಾಗಿದ್ದು ಮುಂದಿನ ಸೂಚನೆಯವರೆಗೆ ಇದು ಜಾರಿಯಲ್ಲಿರುತ್ತದೆ ಎಂದು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ದೆಹಲಿ ಮತ್ತು ಭಾರತದ ಇತರ ಪ್ರಮುಖ ನಗರಗಳನ್ನು ಸಂಪರ್ಕಿಸುವ 30 ವಿಶೇಷ ರೈಲುಗಳ ಸೇವೆ ಆರಂಭವಾಗಿದ್ದು, ನವದೆಹಲಿ ನಿಲ್ದಾಣದಿಂದ ದಿಬ್ರುಗ. ಅಗರ್ತಲಾ, ಹೌರಾ, ಪಾಟ್ನಾ, ಬಿಲಾಸ್ಪುರ, ರಾಂಚಿ, ಭುವನೇಶ್ವರ, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡ್ಗಾಂವ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಮತ್ತು ಜಮ್ಮು ಕಾಶ್ಮೀರದ ತನಕ ಸಂಚಾರ ನಡೆಸಲಿದೆ. ಈಗ ಶ್ರಮಿಕ್ ಸ್ಪೆಷಲ್ ಮತ್ತು 30 ವಿಶೇಷ ರೈಲುಗಳನ್ನು ಹೊರತುಪಡಿಸಿ ಎಲ್ಲಾ ಪ್ರಯಾಣಿಕ ರೈಲು ಸೇವೆಗಳನ್ನು ಅಮಾನತಿನಲ್ಲಿರಿಸಿದ್ದು, ರದ್ದಾದ ಈ ರೈಲುಗಳಿಗಾಗಿ ಜೂನ್ 30 ರವರೆಗೆ ಕಾಯ್ದಿರಿಸಿದ ಎಲ್ಲಾ ಟಿಕೆಟ್‌ಗಳನ್ನು ಸಂಪೂರ್ಣವಾಗಿ ಮರುಪಾವತಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ರೈಲ್ವೆಯ ವಿಶೇಷ ರೈಲುಗಳಿಗೆ ಮುಂಗಡ ಬುಕಿಂಗ್ ಪ್ರಾರಂಭಿಸಿದಾಗ ಸೋಮವಾರ ಒಂದೇ ದಿನ 45,000 ಟಿಕೆಟ್ ಖರೀದಿಯಾಗಿತ್ತು. ಮೇ 18 ರವರೆಗೆ ಮುಂಬೈ ಸೆಂಟ್ರಲ್-ನವದೆಹಲಿ ವಿಶೇಷ ರೈಲಿನ ಎಲ್ಲಾ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss