Tuesday, July 5, 2022

Latest Posts

ಜೂನ್ ನಲ್ಲಿ ಇದೆಯಾ ಕೊರೋನಾ ಲಾಕ್ ಡೌನ್ 5.0: ಕೇಂದ್ರ ಗೃಹ ಸಚಿವಾಲಯ ಏನು ಹೇಳಿದೆ?

ನವದೆಹಲಿ: ದೇಶದಲ್ಲಿ ಮೇ 31ರ ಬಳಿಕವೂ ಲಾಕ್ ಡೌನ್ ಮುಂದುವರಿಯಲಿದೆ, ಈ ಬಗ್ಗೆ ಭಾನುವಾರದ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಖುದ್ದು ಘೋಷಣೆ ಮಾಡಲಿದ್ದಾರೆ ಎಂಬ ಸುದ್ದಿಗಳು ಸತ್ಯಕ್ಕೆ ದೂರವಾದ್ದು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಲಾಕ್ ಡೌನ್ 5.0 ಬಗ್ಗೆ ಕೆಲವೊಂದು ಮಾಧ್ಯಮಗಳು ಬಿತ್ತರಿಸಿರುವ ವರದಿಗಳ ಕುರಿತು ಸ್ಪಷ್ಟನೆ ನೀಡಿರುವ ಸಚಿವಾಲಯ, ಈ ವರದಿಗಳು ಕೇವಲ ವದಂತಿ ಎಂದು ಹೇಳಿದೆ. ಕೊರೋನಾ ಮಹಾಮಾರಿ ತಡೆಯಲು ದೇಶದಲ್ಲಿ ಈಗಾಗಲೇ ನಾಲ್ಕು ಹಂತಗಳಲ್ಲಿ ಬರೋಬ್ಬರಿ 64 ದಿನಗಳ ಲಾಕ್ ಡೌನ್ ಘೋಷಣೆಯಾಗಿದೆ. ಈಗ ನಾಲ್ಕನೇ ಹಂತದ ಲಾಕ್ ಡೌನ್ ಮುಕ್ತಾಯದ ಹಂತದಲ್ಲಿದ್ದು ಈ ಸಂಧರ್ಭ ಜನತೆ ವದಂತಿಗಳಿಗೆ ಕಿವಿಗೊಡದಂತೆ ಸಚಿವಾಲಯ ಮನವಿ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss