ಜೂನ್ ನಲ್ಲಿ ಬೆಂಗಳೂರಿಗರಿಗೆ ಹೆಚ್ಚಿದ ಕಂಟಕ: ಒಂದೇ ತಿಂಗಳಲ್ಲಿ 4197 ಕೊರೋನಾ ಪ್ರಕರಣ ಪತ್ತೆ

0
34

ಬೆಂಗಳೂರು: ಬೆಂಗಳೂರು ಜನರೇ ಮನೆ ಬಿಡುವ ಮುನ್ನ ಸ್ವಲ್ಪ ಯೋಚಿಸಿ. ಏಕೆಂದರೆ ಕಳೆದ ಒಂದು ತಿಂಗಳಿನಲ್ಲಿ ಬರೋಬ್ಬರಿ 4197 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಜುಲೈನಲ್ಲಿ ಸೋಂಕಿತರ ಸಂಖ್ಯೆ 15 ಸಾವಿರ ದಾಟುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ನೀವು ಉದಾಸೀನವಾಗಿ ಓಡಾಡುವುದು, ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಕಾದಿದೆ ಗ್ರಹಚಾರ… ಕಳೆದ ಮಾರ್ಚ್‍ನಿಂದ ಮೇ ಅಂತ್ಯದವರೆಗೂ ಕೇವಲ 358 ಪ್ರಕರಣಗಳು ಮಾತ್ರ ದಾಖಲಾಗಿದ್ದವು. ಲಾಕ್‍ಡೌನ್ ತೆರವಾದ ನಂತರ ಜೂನ್‍ನಲ್ಲಿ ಬರೋಬ್ಬರಿ 4197 ಪ್ರಕರಣಗಳು ದಾಖಲಾಗಿರುವುದರಿಂದ ಮನೆ ಬಿಡುವ ಮುನ್ನ ಯೋಚಿಸುವುದು ಒಳಿತು.
ನಗರದಲ್ಲಿ ಕೊರೊನಾತಂಕದ ಹಿನ್ನೆಲೆಯಲ್ಲಿ ಕೆಲ ಪ್ರದೇಶಗಳಲ್ಲಿ ಸ್ವಯಂ ಲಾಕ್‍ಡೌನ್ ಮಾಡಿಕೊಳ್ಳಲಾಗುತ್ತಿದೆ. ಬಸವನಗುಡಿಯಲ್ಲಿ ಒಂದು ವಾರ ಸ್ವಯಂ ಲಾಕ್‍ಡೌನ್ ಮಾಡಿಕೊಂಡಿದ್ದರೆ, ಮಲ್ಲೇಶ್ವರಂ ವರ್ತಕರು ತಮ್ಮ ಗ್ರಾಹಕರು ಹಾಗೂ ಸಿಬ್ಬಂದಿಗಳ ಆರೋಗ್ಯ ದೃಷ್ಟಿಯಿಂದ ಇಡೀ ಮಲ್ಲೇಶ್ವರಂ ವಾಣಿಜ್ಯ ವಹಿವಾಟನ್ನು ಒಂದು ವಾರ ಕಾಲ ಸ್ತಬ್ಧಗೊಳಿಸಲು ತೀರ್ಮಾನಿಸಿದ್ದಾರೆ. ಜುಲೈ 7ರ ವರೆಗೂ ಮಲ್ಲೇಶ್ವರಂನಲ್ಲಿ ಯಾವುದೇ ಅಂಗಡಿಗಳು, ವಾಣಿಜ್ಯ ಮಳಿಗೆಗಳನ್ನು ತೆರೆಯುವುದಿಲ್ಲ ಎಂದು ವರ್ತಕರ ಸಂಘದ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here