Wednesday, August 10, 2022

Latest Posts

ಜೂ. 17 ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ ಕುವೈಟ್‌ನಿಂದ ಪ್ರಥಮ ಚಾರ್ಟೆರ್ ವಿಮಾನ!

ಮಂಗಳೂರು: ಕೊರೋನಾ ಲಾಕ್‌ಡೌನ್ ಬಳಿಕ ಕುವೈಟ್‌ನಿಂದ ಪ್ರಥಮ ಚಾರ್ಟೆರ್ ವಿಮಾನ ಜೂ. 17 ರಂದು ಸಂಜೆ 5ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.
ಕುವೈಟ್‌ನಿಂದ ರಾಜ್ಯಕ್ಕೆ ಆಗಮಿಸುವ ಮೊದಲ ವಿಮಾನವೂ ಇದಾಗಿದೆ. ಅಕ್ಬರ್ ಟ್ರಾವೆಲ್ಸ್ ಸಂಸ್ಥೆಯವರು ಜಝೀರ ಏರ್‌ವೇಸ್ ಸಹಯೋಗದೊಂದಿಗೆ ಈ ಚಾರ್ಟೆರ್ ವಿಮಾನದ ವ್ಯವಸ್ಥೆ ಕೈಗೊಂಡಿದೆ. 180 ಪ್ರಯಾಣಿಕರು ಈ ವಿಮಾನ ಮೂಲಕ ಸ್ವದೇಶಕ್ಕೆ ಮರಳಲಿದ್ದಾರೆ.
ಪೂರ್ವ ನಿಗದಿಯಂತೆ ವಂದೇ ಭಾರತ್ ಮಿಷನ್ ಯೋಜನೆಯ ಎರಡನೆಯ ಆವೃತ್ತಿಯಲ್ಲಿ ಜೂ. 16 ರಂದು ಕುವೈಟ್‌ನಿಂದ ಬೆಂಗಳೂರು ಮತ್ತು ಹೈದರಾಬಾದ್‌ಗೆ ವಿಮಾನ ಆಗಮಿಸಬೇಕಾಗಿತ್ತು. ಭಾರತದ ವಿದೇಶಾಂಗ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದ್ದ ವಿಮಾನಗಳ ವೇಳಾಪಟ್ಟಿಯಲ್ಲಿ ಈ ವಿಮಾನಗಳ ಹೆಸರು ದಿಢೀರ್ ಕಣ್ಮರೆಯಾಗಿದ್ದವು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss