Wednesday, June 29, 2022

Latest Posts

ಜೂ.30ರವರೆಗೆ ಲಾಕ್‌ಡೌನ್ ವಿಸ್ತರಣೆ: ಜೂ.8ರಿಂದ ತೆರೆದುಕೊಳ್ಳಲಿವೆ ಹೊಟೇಲ್, ಧಾರ್ಮಿಕ ಕೇಂದ್ರಗಳು, ಮಾಲ್

ಹೊಸದಿಲ್ಲಿ: ಕೊರೋನಾ ವೈರಾಣು ಹರಡುವಿಕೆ ವಿರುದ್ಧದ ದೀರ್ಘಕಾಲೀನ ಸಮರಕ್ಕೆ ದೇಶ ಸಜ್ಜಾಗಿದ್ದು, ಇದೀಗ ಕೋವಿಡ್-19ರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಜಾರಿಗೊಳಿಸಿರುವ ಲಾಕ್ ಡೌನ್ ಅನ್ನು ಜೂ.30ರ ವರೆಗೆ ವಿಸ್ತರಿಸಿದೆ. ಆದರೆ ಈ ಲಾಕ್ ಡೌನ್ 5.0 ಕಂಟೈನ್‌ಮೆಂಟ್ ಜೋನ್ ಗೆ ಮಾತ್ರ ಸೀಮಿತವಾಗಿದ್ದು, ಇತರೆ ಪ್ರದೇಶಗಳಲ್ಲಿ ಹಲವು ರಿಯಾಯಿತಿಗಳನ್ನು ಘೋಷಿಸಲಾಗಿದ್ದು, ಜನರ ಬದುಕು ಇನ್ನಷ್ಟು ನಿರಾಳವೆನಿಸಲಿದೆ.
ಲಾಕ್‌ಡೌನ್ 5.0ಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಮೊದಲನೇ ಹಂತದಲ್ಲಿ ಅಂದರೆ ಜೂ.8 ರಿಂದ ಧಾರ್ಮಿಕ ಕೇಂದ್ರಗಳು, ದೇವಸ್ಥಾನಗಳು, ಹೊಟೇಲ್‌ಗಳು ಮತ್ತು ಮಾಲ್‌ಗಳನ್ನು ಆರಂಭಿಸಲು ಅನುಮತಿ ಲಭಿಸಲಿದೆ.
ಅನಂತರ ದ್ವಿತೀಯ ಹಂತದಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೊತೆಗಿನ ಸಮಾಲೋಚನೆಯ ಬಳಿಕ ಶಾಲಾ-ಕಾಲೇಜ್, ಶಿಕ್ಷಣ ಸಂಸ್ಥೆಗಳು ಮತ್ತು ತರಬೇತಿ ಸಂಸ್ಥೆಗಳನ್ನು ಆರಂಭಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಕೇಂದ್ರ ತಿಳಿಸಿದೆ.
ಇದಾಗಿ ಮೂರನೇ ಹಂತದಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರ, ಮೆಟ್ರೋ ರೈಲು ಸೇವೆ, ಸಿನೆಮಾ ಹಾಲ್‌ಗಳು, ಜಿಮ್, ಈಜುಕೊಳ, ಇತರೆ ಮನರಂಜನಾ ಕೇಂದ್ರಗಳನ್ನು ತೆರೆಯುವ ಬಗ್ಗೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದದು ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss