Sunday, August 14, 2022

Latest Posts

ಜೆಇಇ,ನೀಟ್ ಪರೀಕ್ಷೆ ವಿಳಂಬ ಮಾಡಬೇಡಿ: ಪ್ರಧಾನಿ ಮೋದಿಗೆ ಶಿಕ್ಷಣ ತಜ್ಞರ ಪತ್ರ

ನವದೆಹಲಿ: ದೇಶ ವಿದೇಶಗಳ 150 ಕ್ಕೂ ಹೆಚ್ಚು ಶಿಕ್ಷಣ ತಜ್ಞರು ಜೆಇಇ ಮತ್ತು ನೀಟ್ ಪರೀಕ್ಷೆ ವಿಳಂಬ ಮಾಡಬೇಡಿ ಎಂದು ಪತ್ರದ ಮೂಲಕ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಈ ರೀತಿ ಪರೀಕ್ಷೆ ವಿಳಂಬ ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂದಿದ್ದಾರೆ.
ಈಗಾಗಲೇ ಪರೀಕ್ಷೆಗಳನ್ನು ನಡೆಸಲು ವಿರೋಧ ವ್ಯಕ್ತವಾಗಿದ್ದು, ಶಿಕ್ಷಣ ತಜ್ಞರು ಪತ್ರ ಬರೆದು ಇದರಲ್ಲಿ ರಾಜಕೀಯ ಬೆರೆಸುವ ಪ್ರಯತ್ನ ಇದೆ. ಹಾಗಾಗಿ ಪರೀಕ್ಷೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ವಿದ್ಯಾರ್ಥಿಗಳು ಕೆಲ ತಿಂಗಳಿನಿಂದ ತಮ್ಮ ಭವಿಷ್ಯದ ಬಗ್ಗೆ ನೆನಸಿಕೊಂಡು ಕಂಗಾಲಾಗಿದ್ದಾರೆ. ಸಾಕಷ್ಟು ಅನುಮಾನಗಳು ಅವರ ತಲೆಯಲ್ಲಿವೆ. ಶೀಘ್ರ ಎಲ್ಲವನ್ನೂ ಬಗೆಹರಸಿಬೇಕು ಎಂದು ಮನವಿ ಮಾಡಿದ್ದಾರೆ. ಎಚ್ಚರಿಕೆಯಿಂದ ಪರೀಕ್ಷೆ ಬರೆಸಿದರೆ ಮಕ್ಕಳ ಅಮೂಲ್ಯವಾದ ಒಂದು ವರ್ಷ ಹಾಳಾಗುವುದನ್ನು ತಪ್ಪಿಸಬಹುದು ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss