ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ಯು)ದ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಮೋದಿ, ಸ್ವಾಮಿ ವಿವೇಕಾನಂದರನ್ನು ವಿಶ್ವ ದಾರ್ಶನಿಕ ಎಂದು ಬಣ್ಣಿಸಿದರು.
ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಶತಮಾನಗಳಿಂದ ಭಾರತವೂ ಸೇರಿದಂತೆ ಇಡೀ ವಿಶ್ವಕ್ಕೆ ಮಾರ್ಗದರ್ಶಕವಾಗಿವೆ. ಭೂಮಿ ಇರುವವರೆಗೂ ಅವರ ದಾರ್ಶನಿಕ ನೇತೃತ್ವ ಇರಲಿದೆ ಎಂದು ಪ್ರಧಾನಿ ಮೋದಿ ಈ ವೇಳೆ ಅಭಿಪ್ರಾಯಪಟ್ಟರು.
ಜೆಎನ್ಯುನಲ್ಲಿ ಪ್ರತಿಷ್ಠಾಪಿಸಲಾಗಿರುವ ಸ್ವಾಮಿ ವಿವೇಕಾನಂದರ ಈ ಪ್ರತಿಮೆ ನಮ್ಮ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲಿ. ಸ್ವಾಮಿ ವಿವೇಕಾನಂದರ ಈ ಪ್ರತಿಮೆ ದೇಶದ ಏಕತೆಗೆ, ಸಮೃದ್ಧ ಭಾರತದ ಕನಸನ್ನು ಸಾಕಾರಗೊಳಿಸಲು ಪ್ರೇರಣೆ ನೀಡಲಿ ಎಂದು ಮೋದಿ ಹಾರೈಸಿದರು.
ಭಾರತದ ವಿಶ್ವಭ್ರಾತತ್ವದ ಸಂದೇಶವನ್ನು ಹೊತ್ತು ಇಡೀ ಜಗತ್ತು ಸುತ್ತಿದ ವಿವೇಕಾನಂದರು, ಭಾರತದ ಆಧ್ಯಾತ್ಮಿಕ ತಾಕತ್ತನ್ನು ಇಡೀ ಜಗತ್ತಿಗೆ ಪರಿಚಯ ಮಾಡಿಸಿಕೊಟ್ಟರು ಎಂದು ಪ್ರಧಾನಿ ಮೋದಿ ಹೇಳಿದರು.
#WATCH Live | Prime Minister Narendra Modi unveils a statue of Swami Vivekananda at the JNU campus, via video conferencing https://t.co/palOvGRejv
— ANI (@ANI) November 12, 2020