ಹಾಸನ: ಸಕಲೇಶಪುರ ಶಾಸಕ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ ಕುಮಾರಸ್ವಾಮಿ ಪತ್ನಿ ಹಾಗೂ ಪುತ್ರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಕಳೆದ ವಾರ ಆರೋಗ್ಯ ಇಲಾಖೆ ಆಲೂರು ಪಟ್ಟಣದಲ್ಲಿ ರ್ಯಾಂಡಮ್ ಟೆಸ್ಟ್ ನಡೆಸಿತ್ತು ಈ ವೇಳೆ ಶಾಸಕ ಎಚ್.ಕೆ ಕುಮಾರಸ್ವಾಮಿ, ಜಿಪಂ ಸದಸ್ಯೆ ಚಂಚಲಾ ಕುಮಾರಸ್ವಾಮಿ ಹಾಗೂ ಪುತ್ರಿ ಸೇರಿದಂತೆ ಒಟ್ಟು 11 ಜನರ ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು.
ಇದೀಗ ವರದಿ ಬಂದಿದ್ದು, ವರದಿಯಲ್ಲಿ ಚಂಚಲಾ ಕುಮಾರಸ್ವಾಮಿ,ಪುತ್ರಿ ಹಾಗೂ ಅವರ ಕಾರಿನ ಚಾಲಕನಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.ಚಂಚಲಾ ಕುಮಾರಸ್ವಾಮಿ ಮಂಡ್ಯದಲ್ಲಿ ಮಗಳ ಮನೆಯಲ್ಲಿ ವಾಸ್ತವ್ಯವಿದ್ದು, ಅಲ್ಲಿಯೇ ಚಿಕಿತ್ಸೆ ಪಡೆಯಲು ನಿಧ೯ರಿಸಿದ್ದಾರೆ ಎನ್ನಲಾಗಿದೆ. ಕಾರು ಚಾಲಕ ಹಾಸನ ಜಿಲ್ಲಾ ಕೋವಿಡ್ ಚಿಕಿತ್ಸಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸೋಂಕಿಲ ಪ್ರಾಥಮಿಕ ಸಂಪರ್ಕದಲ್ಲಿದ್ದ ಶಾಸಕರು ಸೇರಿದಂತೆ ಅವರ ಎಲ್ಅಲಾ ಸಿಬ್ಬಂದಿ ವರ್ಗದವರು ಪ್ರತ್ಯೇಕ ಮನೆಗಳಲ್ಲಿ ಕ್ವಾರಂಟೈನ್ ಆಗಿದ್ದಾರೆ.