spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜೆ.ಎನ್.ಯು ಗೆ ಹೋದ ದೀಪಿಕ ಪಡುಕೊಣೆ

- Advertisement -Nitte

ನವದೆಹಲಿ: ಮಂಗಳವಾರ ಜೆ.ಎನ್.ಯು ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೊಣೆ ಸಾಥ್ ನೀಡಿದ್ದಾರೆ.

ಜೆ.ಎನ್.ಯು ಕ್ಯಾಂಪಸ್ ನಲ್ಲಿ ನಡೆಯುತ್ತಿದ್ದ ವೇಳೆ ನಟಿ ದೀಪಿಕ ಪಡುಕೊಣೆ ವಿವಿಗೆ ಬೇಟಿ ನೀಡಿದರು. ಪ್ರತಿಭಟನೆ ಮಾಡುತ್ತಿದ್ದ  ವಿದ್ಯಾರ್ಥಿ ಅಧ್ಯಕ್ಷೆ ಐಷ್ಯ ಘೋಷ್ ಮತ್ತು ಕನ್ಹಯ್ಯ ಕುಮಾರ್ ಜೊತೆ ನಿಂತು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ದೀಪಿಕಾ ಜೆ.ಎನ್.ಯುಗೆ ಬೇಟಿ ನೀಡಿ ಎಡಪಂಥವನ್ನು ಬೆಂಬಲಿಸುವುದಾಗಿ ಹೇಳಿದಂತಾಗಿದೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡ ದೀಪಿಕಾ ಯಾವುದೇ ಭಾಷಣ ಮಾಡದೆ ಹಿಂದಿರುಗಿದ್ದಾರೆ. ನಂತರ ಮಾಧ್ಯಮಕ್ಕೆ ಮಾತನಾಡಿದ ದೀಪಿಕಾ ಪಡುಕೊಣೆ “ನನಗೆ ಹೆಮ್ಮೆ ಎನಿಸುತ್ತಿದೆ, ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಜನರು ಹೆದರುತ್ತಿಲ್ಲ. ನಮ್ಮ ದೇಶದ ಭವಿಷ್ಯದ ಬಗ್ಗೆ ಚಿಂತನೆ ನಡೆಸುತ್ತಿರುವುದು ಶ್ಲಾಘನೀಯ. ನಮ್ಮ ಜನರು ಬದಲಾವಣೆಗಾಗಿ ಹೊರಗೆಬಂದು ತಮ್ಮ ಬೆಂಬಲ ಸೂಚಿಸುತ್ತಿರುವುದು ಸಂತಸ ತಂದಿದೆ.” ಎಂದು ಹೇಳಿದ್ದಾರೆ.

ಕೆಲವುದಿನಗಳ ಹಿಂದೆ ಬಾಲಿವುಡ್ ನ ವಿಶಾಲ್ ಬಾರದ್ವಾಜ್, ಅನುರಾಗ್ ಕಶ್ಯಪ್, ಅನುಭವ್ ಸಿನ್ಹ, ಜೋಯ ಅಖ್ತರ್, ದಿಯಾ ಮಿರ್ಜಾ, ರಾಹುಲ್ ಬೋಸ್, ರಿಚ್ಚಾ ಚಡ್ಡ ಮುಂತಾದವರು ಮುಂಬೈನಲ್ಲಿ ನಡೆದ ಘರ್ಷಣೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss