ಜೆ.ಎನ್.ಯು ನಲ್ಲಿ ನಡೆದ ಘರ್ಷಣೆಯನ್ನು ವಿರೋಧಿಸಿ ಪ್ರತಿಭಟನೆಗಳು ಹೆಚ್ಚಾಗಿತ್ತಲಿದೆ. ಜೆ.ಎನ್.ಯು ವಿವಿ ಯ ಉಪಕುಲಪತಿಯಾದ ಜಗದೀಶ್ ಕುಮಾರ್ ಅವರಿಗೆ ಪದಚ್ಯುತಿ ನೀಡಬೇಕೆಂದು ವಿದ್ಯಾರ್ಥಿಗಳು ಮತ್ತು ಪ್ರಾದ್ಯಾಪಕರು ಒತ್ತಡವೇರುತ್ತಿದ್ದರೆ, ಮತ್ತೊಂದೆಡೆ ಘರ್ಷಣೆಯ ವಿರುದ್ಧ ಎಬಿವಿಪಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್
ಭಾನುವಾರ ನಡೆದ ಮಾರಾಮಾರಿಯಲ್ಲಿ 32 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದರು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು. ಘರ್ಷನೆಯಲ್ಲಿ ಗಂಭಿರವಾಗಿ ಹಲ್ಲೆಗೆ ಒಳಗಾದ ಐಷ್ಯಗೆ 18 ಹೊಲಿಗೆಗಳು ಹಾಕಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರತಿಭಟನೆ
ಘರ್ಷಣೆಯನ್ನು ವಿರೋಧಿಸುತ್ತಿರುವ ವಿವಿದ ವಿಶ್ವ ವಿದ್ಯಾಲಯಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದೆ. ಇದರ ಹೆಚ್ಚಿನ ತನಿಕೆಯನ್ನು ದಿಲ್ಲಿಯ ಕ್ರೈಮ್ ವಲಯಕ್ಕೆ ನೀಡಲಾಗಿದೆ.
ಎಬಿವಿಪಿ ವಿದ್ಯಾರ್ಥಿಗಳು ರುಯಿಯಾ ಕಾಲೇಜು, ಜೆ ಎನ್ ಯು ಮತ್ತು ಪೂಣೆಯಲ್ಲಿ ಕಾಲೇಜಿನ ಎದುರಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಉಪಕುಲಪತಿಯ ಪದಚ್ಯುತಿ
ಜೆ.ಎನ್.ಯು ಸಂಸ್ಥೆಯ ಉಪಕುಲಪತಿಯಾದ ಜಗದೀಶ್ ಕುಮಾರ್ ಅವರ ಗೈರು ಹಾಜರಿಯನ್ನು ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಕುಲಪತಿಯವರನ್ನು ತಮ್ಮ ಸ್ಥಾನದಿಂದ ಇಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.