ಹೊಸ ದಿಗಂತ ವರದಿ, ಕಲಬುರಗಿ:
ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಲ್ಲಿ ಕೆಕೆಆರ್ಡಿಬಿ ಅನುದಾನದಲ್ಲಿ 40 ಲಕ್ಷ ರೂಪಾಯಿ ಸಿಸಿ ರಸ್ತೆ, ಹಾಗೂ 15 ಲಕ್ಷ ರೂಪಾಯಿಯಲ್ಲಿ ಕಂಪೌಂಡ ನಿರ್ಮಾಣದ ಕಾರ್ಯದಲ್ಲಿ ಕಳಪೆ ಕಾರ್ಯ ನಡೆದಿದ್ದು, ಕೂಡಲೇ ಸರಿಯಾದ ರೀತಿಯಲ್ಲಿ ಕಾಮಗಾರಿಯನ್ನು ಮಾಡಬೇಕೆಂದು ವಿಶ್ವ ಹಿಂದು ಪರಿಷತ್ ಜೇವರ್ಗಿ ತಾಲೂಕಿನ ಘಟಕದ ಅಧ್ಯಕ್ಷ ಪ್ರವೀಣಕುಮಾರ ಕುಂಟೋಜಿಮಠ ಹೇಳಿದ್ದಾರೆ.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಳಪೆ ಕಾಮಗಾರಿಯ ಬಗ್ಗೆ ಪ್ರಾಧೇಶಿಕ ಆಯುಕ್ತರಿಗೆ, ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯದರ್ಶಿಗಳಿಗೆ ಹೀಗೆ ಸಂಬಂಧಪಟ್ಟ ಹಲವು ಅಧಿಕಾರಿಗಳಿಗೆ ಕಾಮಗಾರಿಯ ಬಗ್ಗ ದೂರು ಕೊಟ್ಟರು ಸಹ ಕ್ರಮವನ್ನು ತೆಗೆದುಕೊಂಡಿಲ್ಲ ಎಂದರು. ಕೂಡಲೇ ಸಮಗ್ರ ತನಿಖೆ ಮಾಡಿ ತಪ್ಪಿಸ್ಥರ ವಿರುದ್ದ ಕ್ರಮವನ್ನು ಜರುಗಿಸಿ ರಸ್ತೆ ನಿರ್ಮಾಣವನ್ನು ಮಾಡಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಶ್ರೀ ರಾಮ ಸೇನೆಯ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ ಸ್ವಾದಿ, ಆನಂದ ದೇಸಾಯಿ ಸೇರಿದಂತೆ ಹಲವರು ಇದ್ದರು.