Friday, July 1, 2022

Latest Posts

ಜೈಪುರದಲ್ಲಿ ಮೂವರು ಕೊರೋನಾ ರೋಗಿಗಳು ಗುಣಮುಖ!

ಜೈಪುರ: ದೇಶದಲ್ಲಿ ಈಗಾಗಲೇ 110 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ. ಆದರೆ ಜೈಪುರದ ವೈದ್ಯರು ಮೂವರು ಕೊರೋನಾ ಸೋಂಕಿತರನ್ನು ಗುಣಪಡಿಸಿ, ಜನರಲ್ಲಿ ವಿಶ್ವಾಸ ಮೂಡಿಸಿದ್ದಾರೆ.

ಮಲೇರಿಯಾ, ಹೆಚ್.ಐ.ವಿ ಪಾಜಿಟಿವ್ ಮತ್ತು ಹಂದಿ ಜ್ವರಕ್ಕೆ ನೀಡುವ ಔಷಧಿಗಳನ್ನು ಸಂಯೋಜಿಸಿ ಕೊರೋನಾ ವೈರಸ್ ತಗುಲಿದ್ದ ನಾಲ್ಕು ಮಂದಿ ಸೋಂಕಿತರಲ್ಲಿ ಮೂವರನ್ನು ಇಲ್ಲಿನ ಸವಾಯ್ ಮಾನ್ ಸಿಂಗ್ ಸರ್ಕಾರಿ ಆಸ್ಪತ್ರೆಯ ವೈದ್ಯರು ಗುಣಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮೂವರು ಕೊರೋನಾ ಸೋಂಕಿತರಲ್ಲಿ ಇಬ್ಬರು ಹಿರಿಯ ನಾಗರೀಕರ ಪರೀಕ್ಷಾ ವರದಿ ಇದೀಗ ನೆಗಟೀವ್ ಆಗಿದೆ. ಎಸ್ಎಂಎಸ್ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಧನ್ಯವಾದ ಎಂದು ಶ್ಲಾಘಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss