ಹೊಸ ದಿಗಂತ ವರದಿ, ಔರಾದ್:
ಎಲ್ಲಾ ಮಾನವರಿಗೆ ಶಾಂತಿ, ಸಂತೃಪ್ತಿ, ನೆಮ್ಮದಿ ದೊರಕಬೇಕಾದರೇ ಸತ್ಸಂಗದಿಂದ ಹಾಗು ಶಿವ ನಾಮ ಸರಣೆಯಿಂದ ಮಾತ್ರ ಸಾದ್ಯವಾಗಿದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪರಮ ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಆಶಿವರ್ಚನ ನೀಡಿದರು.
ಅವರು ಶನಿವಾರ ತಾಲೂಕಿನ ಠಾಣಾ ಕುಶನೂರ ಗ್ರಾಮದಲ್ಲಿ ರವಿವಾರ ಜರೂಗಿದ ಭವಾನಿ ಮಾತಾ ಮಂದಿರದ ತೃತಿಯ ಜಾತ್ರಾ ಮಹೊತ್ಸವದ ನಿಮಿತ್ಯ ಶಿವತತ್ವ ಚಿಂತನೆ ಕಾರ್ಯಕ್ರಮದಲ್ಲಿ ಜ್ಯೋತಿ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಆಶಿರ್ವಚನ ನೀಡಿದರು.
ಶಿವನಾಮ ಸ್ಮರಣೆಯಲ್ಲಿ ನೆಮ್ಮದಿ
ಎಲ್ಲಾ ಮಾನವರಿಗೆ ಶಾಂತಿ, ಸಂತೃಪ್ತಿ, ನೆಮ್ಮದಿ ದೊರಕಬೇಕಾದರೇ ಸತ್ಸಂಗದಿಂದ ಹಾಗು ಶಿವ ನಾಮ ಸ್ಮರಣೆಯಿಂದ ಮಾತ್ರ ಸಾದ್ಯವಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು, ವಿರಕ್ತ ಮಠ ಠಾಣಾ ಕುಶನೂರ, ಅಧ್ಯಕ್ಷತೆ ಭವಾನಿ ಮಾತೆ ಮಂದಿರ ಟ್ರಸ್ಟ್ ಅಧ್ಯಕ ಧನರಾಜ ವಡಿಯಾರ, ಸಂಜುಕೂಮಾರ ಜುಮ್ಮ, ಬಿಜೆಪಿ ಔರಾದ ತಾಲುಕ ಅಧ್ಯಕ್ಷ ರಾವಶೆಟ್ಟಿ ಪನ್ನಾಳೆ, ಗ್ರಾಪಂ ಸದಸ್ಯ ಕಾಶಿನಾಥ ಜಿರ್ಗೆ, ರಘುನಾಥರಾವ ರೋಟ್ಟೆ, ವಸಂತ ದೇಸಾಯಿ, ಜಗನ್ನಾಥ ಪಸರಗೆ, ಓಂಕಾರ ಸ್ವಾಮಿ, ಶಿವರಾಜ ಬೋಚರೆ, ಶಿವಶರಣಪ್ಪ ವಲ್ಲೆಪೂರೆ, ಧನರಾಜ ಜಿರ್ಗೆ,ಮಲ್ಲಿಕಾರ್ಜೂನ ಬಿರಾದರ, ಶಿವಲಿಂಗ ಪರಶೆಟ್ಟೆ, ಹಾಗೂ ಇತರರು ಉಪಸ್ಥಿತರಿದ್ದರು, ಮಹೇಶ ವಡಿಯಾರ ಸ್ವಾಗತಿಸಿದರು, ಶಾಂತಕೂಮಾರ ಬೋಚರೆ ನಿರೂಪಣೆ ಮಾಡಿದರು. , ಬಾಲಾಜಿ ವಾಗ್ಮಾರೆ ವಂದಾನಾರ್ಪಣೆ ನಡೆಸಿಕೊಟ್ಟರು.